News / Blog Details

  • Home
  • >
  • News / Blog Details

ಕಾಂಗ್ರೆಸ್‌ ಅಲ್ಪಾಯುಶಿ ಸರ್ಕಾರ-  ಛಲವಾದಿ ನಾರಾಯಣಸ್ವಾಮಿ

  • 12
img ಕಾಂಗ್ರೆಸ್‌ ಅಲ್ಪಾಯುಶಿ ಸರ್ಕಾರ-  ಛಲವಾದಿ ನಾರಾಯಣಸ್ವಾಮಿ
Font size:
Print

ಮುಸ್ಲಿಂ ಸಮುದಾಯದಲ್ಲಿ ಅನೇಕ ಜಾತಿಗಳಿವೆ. ಅದರಲ್ಲಿ ಎಲ್ಲರನ್ನೂ ಒಂದು ಮಾಡಿ ಮುಸ್ಲಿಮರನ್ನು ಅತಿ ಹೆಚ್ಚು ಎಂದು ಬಿಂಬಿಸಿದ್ದಾರೆಂದು ಜಾತಿಗಣತಿ ವಿರುದ್ಧ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ  ಕಿಡಿಕಾರಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಷ್ಟು ದಿನ ಯಾರು ಅಲ್ಪಸಂಖ್ಯಾತರು ಇದ್ದರು, ಈಗ ಅವರು ಬಹುಸಂಖ್ಯಾತರು ಆಗಿದ್ದಾರೆ. ಹಾಗಿದ್ದರೆ ಅವರಿಗೆ ಅಲ್ಪಸಂಖ್ಯಾತ ಸೌಲಭ್ಯ ಯಾಕೆ?. ಕಾಂಗ್ರೆಸ್ ಮಾಡುತ್ತಿರುವುದು ಮುಸ್ಲಿಮರಿಗೆ ಯಾವುದೂ ಉಪಯೋಗಕ್ಕೆ ಬರೋದಿಲ್ಲಾ. ಮುಸ್ಲಿಮರನ್ನು ಅತಿ ಹೆಚ್ಚು ಅಂತ ತೋರಿಸಿ ಅವರಿಗೆ ಇತರರ ಕೆಂಗಣ್ಣಿಗೆ ಗುರಿ ಮಾಡಿದ್ದೀರಿ. ಇದು ಅಲ್ಪಾಯುಶಿ ಸರ್ಕಾರ, ಈ ಸರ್ಕಾರ‌ ಯಾವತ್ತಾದ್ರೂ ಹೋಗಬಹುದು ಎಂದು ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯದಲ್ಲಿ ಜನಾಕ್ರೋಶ ಆರಂಭವಾಗಿ, ಅಭಿವೃದ್ಧಿ ಶೂನ್ಯವಾಗಿದೆ. ಐದು ವರ್ಷ ಆಡಳಿತ ಮುಗಿಸಿದ್ರೆ ಸಾಕು ಎನ್ನುವ ಸ್ಥಿತಿಗೆ ಸರ್ಕಾರ‌ ಬಂದು ತಲುಪಿದೆ. ಇಡೀ ರಾಜ್ಯದಲ್ಲಿ ಗೊಂದಲದಲ್ಲಿದೆ. ಹೀಗಾಗಿ ನಮ್ಮ ಪಕ್ಷ ಜನಾಕ್ರೋಶ ಯಾತ್ರೆ ಕೈಗೊಂಡಿದೆ. ನಾಳೆ ಬೆಳಗಾವಿಯಿಂದ ಎರಡನೇ ಸುತ್ತಿನ ಯಾತ್ರೆ ಆರಂಭವಾಗುತ್ತಿದೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಸುಳ್ಳು ಹೇಳುವ ಫ್ಯಾಕ್ಟರಿ ಓಪನ್ ಮಾಡಿದ್ದಾರೆ. ಅಂಬೇಡ್ಕರ್ ಪ್ರಶಸ್ತಿ ವಿಚಾರದಲ್ಲಿ ಗೊಂದಲ ಸೃಷ್ಟಿ ಮಾಡಿದೆ. ದಲಿತರಲ್ಲೇ ರೈಟು, ಲೆಫ್ಟ್ ಅಂತ ಕಾಂಗ್ರೆಸ್ ಗೊಂದಲ ಸೃಷ್ಟಿ ಮಾಡಿದೆ. ಅವರಿಗೆ ಜಾಸ್ತಿ ಕೊಟ್ಟಿದ್ದೇವೆ, ಇವ್ರಿಗೆ ಜಾಸ್ತಿ ಕೊಟ್ಟಿದ್ದೇವೆ ಅಂತ ಅಸಮಾಧಾನ ಹುಟ್ಟಿಸಿದ್ದಾರೆ. ಒಕ್ಕಲೆಬ್ಬಿಸಿ ಜನರ ನಡುವೆ ಗೊಂದಲ ಸೃಷ್ಟಿ ಮಾಡಲಾಗುತ್ತಿದೆ ಎಂದು ಟೀಕಿಸಿದ್ದಾರೆ.
 

No Reviews