ಬೆಂಗಳೂರು: 2025ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಫಲಿತಾಂಶ ಪ್ರಕಟವಾಗಿದೆ. ಒಟ್ಟಾರೆ ಶೇ.66.14 ಫಲಿತಾಂಶ ಬಂದಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಈ ಬಾರಿ ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳು 7 ಲಕ್ಷ 90 ಸಾವಿರದ 890. ಅದರಲ್ಲಿ 5 ಲಕ್ಷ 23 ಸಾವಿರದ 075 ಮಕ್ಕಳು ಈ ಬಾರಿ ಪರೀಕ್ಷೆಯನ್ನು ಪಾಸ್ ಮಾಡಿದ್ದಾರೆ. SSLC ಪರೀಕ್ಷೆಯಲ್ಲಿ ಈ ಬಾರಿ ಬರೋಬ್ಬರಿ 22 ಮಕ್ಕಳು 625ಕ್ಕೆ 625 ಅಂಕವನ್ನು ತೆಗೆದು ಗಮನ ಸೆಳೆದಿದ್ದಾರೆ. ಇದರ ಜೊತೆಗೆ 65 ವಿದ್ಯಾರ್ಥಿಗಳು 624 ಅಂಕ ಹಾಗೂ 108 ವಿದ್ಯಾರ್ಥಿಗಳು 623, 189 ವಿದ್ಯಾರ್ಥಿಗಳು 622, 259 ವಿದ್ಯಾರ್ಥಿಗಳು 621 ಮತ್ತು 327 ವಿದ್ಯಾರ್ಥಿಗಳು 620 ಅಂಕಗಳನ್ನು ತೆಗೆದು ಉತ್ತೀರ್ಣರಾಗಿದ್ದಾರೆ.
2024-25ರ SSLC ಫಲಿತಾಂಶ ಪ್ರಕಟ- ಈ ಬಾರಿ ಶೇ.66.14 ರಷ್ಟು ಫಲಿತಾಂಶ
2025-05-02 12:20:46- 85