ನಟ ಕಿಚ್ಚ ಸುದೀಪ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸುದೀರ್ಘ ಪತ್ರ ಬರೆದಿದ್ದು, ಆಪರೇಶನ್ ಸಿಂದೂರ ಕಾರ್ಯಾಚರಣೆ ವಿಜಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ನನ್ನ ತಾಯಿ ನಿಧನದ ಸಂತಾಪ ಪತ್ರಕ್ಕೆ ನಿಮಗೆ ಧನ್ಯವಾದ ಅರ್ಪಿಸುತ್ತೇನೆ. ಇಂದು ನಾನು ಕೇವಲ ಕೃತಜ್ಞತಾಪೂರ್ವಕ ಮಗನಾಗಿ ಅಲ್ಲದೇ ಹೆಮ್ಮೆಯ ಭಾರತೀಯನಾಗಿ ಪತ್ರ ಬರೆಯುತ್ತಿದ್ದೇನೆ. ಆಪರೇಷನ್ ಸಿಂಧೂರ ವಿಜಯೋತ್ಸವಕ್ಕೆ ನನ್ನ ಮೆಚ್ಚುಗೆ ಇದೆ. ಅದು ಕೇವಲ ಪ್ರತಿಕ್ರಿಯೆಯಾಗಿರಲಿಲ್ಲ. ಈ ಮೂಲಕ ಜಗತ್ತಿಗೆ ಒಂದು ದಿಟ್ಟ, ನಿರ್ಣಾಯಕ ಸಂದೇಶ. ಭಾರತವು ಹಿಂಜರಿಯುವುದಿಲ್ಲ, ಭಾರತವು ಮರೆಯುವುದಿಲ್ಲ ಮತ್ತು ಭಾರತವು ಯಾವಾಗಲೂ ಮೇಲಿರುತ್ತದೆ. ಕೇವಲ ಪದಗಳಿಂದ ಮಾರ್ಗದರ್ಶನ ಮಾಡದೆ, ದೃಢ ನಿಶ್ಚಯದಿಂದ ಮಾರ್ಗದರ್ಶನ ಮಾಡುವ ನಾಯಕನನ್ನು ನಾವು ನೋಡುತ್ತಿದ್ದೇವೆ. ಪ್ರತಿಯೊಬ್ಬ ಕನ್ನಡಿಗ ಮತ್ತು ಇಡೀ ಕನ್ನಡ ಚಲನಚಿತ್ರೋದ್ಯಮವು ನಿಮ್ಮೊಂದಿಗೆ ದೃಢವಾಗಿ ನಿಂತಿದೆ. ನಿಮ್ಮ ಧೈರ್ಯದಿಂದ ಸ್ಫೂರ್ತಿ ಪಡೆಯುತ್ತೇವೆ. ನಿಮ್ಮ ನಾಯಕತ್ವದಲ್ಲಿ, ನಮ್ಮ ರಕ್ಷಣಾ ಪಡೆಗಳು ಅಪ್ರತಿಮ ನಿಖರತೆ, ಶಿಸ್ತು ಮತ್ತು ಶೌರ್ಯವನ್ನು ಪ್ರದರ್ಶಿಸಿವೆ. ಅವರ ಯಶಸ್ಸು ನಮ್ಮ ಹೆಮ್ಮೆ. ನಾವೆಲ್ಲರೂ ಒಂದೇ, ಧ್ವನಿಯೂ ಒಂದೇ, ಒಂದೇ ರಾಷ್ಟ್ರವಾಗಿ ಒಗ್ಗಟ್ಟಿನಿಂದ ನಿಂತಿದ್ದೇವೆ. ಪ್ರಧಾನಿ ಮೋದಿ ಅವರಿಗೆ ಕಿಚ್ಚ ಸುದೀಪ್ ಪತ್ರ ಬರೆದಿದ್ದಾರೆ.
ಆಪರೇಶನ್ ಸಿಂದೂರ ವಿಜಯಕ್ಕೆ ಪ್ರಧಾನಿ ಮೋದಿಗೆ ಪತ್ರ ಬರೆದ ನಟ ಸುದೀಪ್
2025-05-10 16:27:37- 9