News / Blog Details

  • Home
  • >
  • News / Blog Details

ನಟ ಸೂರ್ಯ ಹೊಸ ಸಿನಿಮಾದಲ್ಲಿ ಯುವ ನಟಿ ನಾಯಕಿ; ಯಾರು ಆ ಬ್ಯೂಟಿ?

  • 79
img ನಟ ಸೂರ್ಯ ಹೊಸ ಸಿನಿಮಾದಲ್ಲಿ ಯುವ ನಟಿ ನಾಯಕಿ; ಯಾರು ಆ ಬ್ಯೂಟಿ?
Font size:
Print

ಹೈದರಾಬಾದ್: ಕಾಲಿವುಡ್ ನಟ ಸೂರ್ಯ ಅವರ ರೆಟ್ರೋ ಸಿನಿಮಾ ಬಳಿಕ ಹೊಸ ಚಿತ್ರದ ಮುಹೂರ್ತ ನೆರವೇರಿದೆ. ತೆಲುಗಿನಲ್ಲಿ ಸರ್, ಲಕ್ಕಿ ಭಾಸ್ಕರ್ ನಂತಹ ಹಿಟ್ ಸಿನಿಮಾಗಳನ್ನು ನೀಡಿರುವ ವೆಂಕಿ ಸೂರ್ಯ ಅವರ ‘ಸೂರ್ಯ 46’ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಹೈದರಾಬಾದ್‌ನ ರಾಮನಾಯ್ಡು ಸ್ಟುಡಿಯೋದಲ್ಲಿ ಚಿತ್ರದ ಮುಹೂರ್ತ ನೆರವೇರಿದೆ. ಪ್ರೇಮಲು' ಚಿತ್ರದಲ್ಲಿ ಮಿಂಚಿ ದೊಡ್ಡ ಆಫರ್‌ಗಳನ್ನು ಗಿಟ್ಟಿಸಿಕೊಳ್ಳುತ್ತಿರುವ ನಟಿ ಮಮಿತಾ ಬೈಜು  ಸೂರ್ಯ ಅವರಿಗೆ ನಾಯಕಿಯಾಗಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಫಾರ್ಚೂನ್ ಫೋರ್ ಸಿನಿಮಾಸ್ ಮತ್ತು ಶ್ರೀಕರ ಸ್ಟುಡಿಯೋಸ್ ಜೊತೆಗೆ ಸಿತಾರಾ ಎಂಟರ್ಟೈನ್ವೆಂಟ್ಸ್ ಈ ಯೋಜನೆಗೆ ಬಂಡವಾಳ ಹಾಕಲಿದೆ.
ಸೂರ್ಯ ಅವರ ಲೇಟೆಸ್ಟ್ ರಿಲೀಸ್, ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ರೆಟ್ರೋ ಬಾಕ್ಸಾಫೀಸ್‌ನಲ್ಲಿ ಹೇಳಿಕೊಳ್ಳುವ ಮಟ್ಟಕ್ಕೆ ಮೋಡಿ ಮಾಡಿಲ್ಲ. ಹೀಗಾಗಿ ಸೂರ್ಯ ಅವರ ಮುಂದಿನ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಿದೆ.

No Reviews