ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಘ್ನತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು. ಇದರ ಛಾಯೆ ಐಪಿಎಲ್ ಮೇಲೂ ಆವರಿಸಿದೆ. ಬಿಸಿಸಿಐ ಇಂದು ನಡೆಸಿದ ನಡೆಸಿದ ಸಭೆಯಲ್ಲಿ IPL 2025ರ ಪಂದ್ಯಾವಳಿಯನ್ನು ಅನಿರ್ಧಿಷ್ಟವದಿಗೆ ರದ್ದುಗೊಳಿಸಿ ಆದೇಶಿಸಿದೆ. ನಿನ್ನೆ ರಾತ್ರಿ ಧರ್ಮಶಾಲದಲ್ಲಿ ನಡೆಯುತ್ತಿದ್ದ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ನಡುವಿನ ಪಂದ್ಯವನ್ನು ಅರ್ಧಕ್ಕೆ ರದ್ದುಗೊಳಿಸಿಲಾಗಿತ್ತು. ಇದೀಗ ಬಿಸಿಸಿಐ ಐಪಿಎಲ್ ಪಂದ್ಯವಳಿಯನ್ನು ಅನಿರ್ಧಿಷ್ಟವಾದಿಗೆ ಸ್ಥಗಿತಗೊಳಿಸಲಾಗಿದೆ. ಈ ನಿರ್ಧಾರವನ್ನ ಆರ್ಸಿಬಿ ಸ್ವಾಗತಿಸಿ ಟ್ವಿಟ್ ಮಾಡಿದೆ. ಏ. 22 ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿದ್ದು, ಈ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತ ಪಾಕ್ ಉಗ್ರರ 9 ಅಡಗುತಾಣಗಳ ಮೇಲೆ ಕ್ಷಿಪಣಿ ದಾಳಿ ನಡೆಸುವ ಮೂಲಕ ತಕ್ಕ ಉತ್ತರ ನೀಡಿತ್ತು. ಗುರುವಾರ ತಡರಾತ್ರಿಯೂ ಭಾರತ ಪಾಕಿಸ್ತಾನದ ವಿವಿಧ ನಗರಗಳನ್ನು ಮೇಲೆ ದಾಳಿ ನಡೆಸಿದ್ದು, ಇದೀಗ ಎರಡೂ ರಾಷ್ಟ್ರಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಭಾರತ ಪಾಕ್ ನಡುವಿನ ಯುದ್ಧದ ಛಾಯೆಯು ಇದೀಗ ಐಪಿಎಲ್ ಮೇಲು ಬಿದ್ದಿದ್ದು. ಐಪಿಎಲ್ನನ್ನು ಅನಿರ್ಧಿಷ್ಟವಾದಿಗೆ ಸ್ಥಗಿತಗೊಳಿಸಲಾಗಿದೆ.
ಭಾರತ, ಪಾಕಿಸ್ತಾನದ ನಡುವೆ ಉದ್ವಿಗ್ನ; ಐಪಿಎಲ್ ಟೂರ್ನಿ ಮುಂದೂಡಿದ ಬಿಸಿಸಿಐ
2025-05-09 13:18:18- 69