ನವದೆಹಲಿ : ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರ ಮೊಣಕಾಲಿಗೆ ಪೆಟ್ಟುಬಿದ್ದಿರುವ ಕಾರಣ ಚಾಂಪಿಯನ್ಸ್ ಟ್ರೋಫಿ ಪಂದ್ಯದ ಆರಂಭಕ್ಕೂ ಮೊದಲೇ ಭಾರತ ತಂಡಕ್ಕೆ ಪೆಟ್ಟು ಬಿಂದಿದೆ.
ಮೈದಾನದಲ್ಲಿ ಅಭ್ಯಾಸ ಮಾಡುತ್ತಿದ್ದಾಗ ಹಾರ್ದಿಕ್ ಪಾಂಡ್ಯ ಅವರು ಪಂತ್‌ಗೆ ಬಾಲ್ ಎಸೆಯತ್ತಿದ್ದರು. ಈ ವೇಳೆ ಬಾಲ್ ಪಂತ್ ಅವರ ಎಡ ಮೊಣಕಾಲಿಗೆ ಬಡಿದಿದ ಕಾರಣ ಪಂತ್ ಕುಂಟುತ್ತಾ ನಡೆದಿದ್ದಾರೆ.
ವೈದ್ಯಕೀಯ ಆರೈಕೆಯ ನಂತರ ಪಂತ್ ಮೊಣಕಾಲಿನ ಪಟ್ಟಿಯೊಂದಿಗೆ ಅಭ್ಯಾಸವನ್ನು ಮುಂದುವರೆಸಿದ್ದಾರೆ ಎಂದು ತಿಳಿದುಬಂದಿದೆ 2022 ರಲ್ಲಿ ರಿಷಭ್ ಪಂತ್ ಅವರ ಕಾರು ಭೀಕರ ಅಪಘಾತವಾಗಿದ್ದು. ಈ ಸಂದರ್ಭದಲ್ಲಿ ಎಡ ಮೊಣಕಾಲಿಗೆ ಬಲವಾದ ಏಟು ಬಿದ್ದಿತ್ತು.
ಪಂತ್ ತಮ್ಮ ಮೊದಲ ಚಾಂಪಿಯನ್ಸ್ ಟ್ರೋಫಿಯನ್ನು ಆಡುತ್ತಿದ್ದಾರೆ. ಭಾರತವು ಫೆಬ್ರವರಿ 20 ರಂದು ದುಬೈನಲ್ಲಿ ಬಾಂಗ್ಲಾದೇಶ ವಿರುದ್ಧ ತಮ್ಮ ಚಾಂಪಿಯನ್ಸ್ ಟ್ರೋಫಿ ಅಭಿಯಾನವನ್ನು ಪ್ರಾರಂಭಿಸಲಿದೆ. ಫೆಬ್ರವರಿ 23 ರಂದು ಭಾರತ ಮತ್ತು ಪಾಕಿಸ್ತಾನ ಮಧ್ಯೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಜಯ ಯಾರ ಪರ ಆಗುತ್ತದೆ ಎಂದು ಕಾದು ನೋಡಬೇಕಾಗಿದೆ.