ಚಾಮರಾಜನಗರ : ಪ್ರೀತಿ ಹೆಸರಿನಲ್ಲಿ ಮಹಿಳೆ ಜೊತೆ ಲೈಂಗಿಕ ಸಂಪರ್ಕ ಬೆಳೆಸಿ ಪರಾರಿಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ರಾಮಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ತನಗೆ ಮೋಸ ಮಾಡಿರುವ ಕೊಳ್ಳೇಗಾಲದ ಕ್ಲಿಂಟನ್ ವಿರುದ್ಧ ಸಂತ್ರಸ್ತ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಪ್ರಕಾರಣದ ಹಿನ್ನಲೆ
ಪ್ರೀತಿ ಮಾಡು ಎಂದು ಹಿಂದೆ ಬಿಂದಿದ್ದ ಪ್ರೀಯತಮೆಯ ಬಾಳನ್ನೆ ನರಕ ಮಾಡಿದ್ದಾನೆ , ಮುರು ಭಾರಿ ಗರ್ಭಪಾತ ಮಾಡಿಸಿದ್ದಾನೆ ಇವರ ಈ ವಿಚಿತ್ರ ಪ್ರೀತಿಗೆ ಕುಂಬಸ್ಥರು ಕಣ್ಣಿರು ಹಾಕುವ ಪರಿಸ್ಥಿಯನ್ನು ತದ್ದೊಂದಿದ್ದಾರೆ.
2021 ರಲ್ಲಿ ನರ್ಸಿಂಗ್ ಕೋರ್ಸ್ ಮಾಡುವ ವೇಳೆ ಕ್ಲಿಂಟನ್ ಎಂಬಾತನ ಜೊತೆ ಮಹಿಳೆ ಸ್ನೇಹ ಹೊಂದಿದ್ದರು. ಇಬ್ಬರು ಸಹ ಹಲವೆಡೆ ಸುತ್ತಾಟ ನಡೆಸಿದ್ದರು. ಇವರಿಬ್ಬರ ಪ್ರೀತಿ-ಪ್ರೇಮದ ಬಗ್ಗೆ ಮನೆಯವರಿಗೂ ಗೊತ್ತಾಗಿತ್ತು. ವಿಚಾರ ತಿಳಿದ ಪ್ರೇಯಸಿ ಕುಟುಂಬಸ್ಥರು ಕ್ಲಿಂಟನ್‌ನ ಮನೆಯವರಿಗೆ ವಿಚಾರ ತಿಳಿಸಿದ್ದರು. ಆದರೆ, ಕ್ಲಿಂಟನ್‌ಗೆ ಸಹೋದರಿ ಇದ್ದ ಕಾರಣ ಆಕೆಯ ವಿವಾಹ ಆಗುವವರೆಗೂ ಮದುವೆಗೆ ಕುಟುಂಬಸ್ಥರು ನಿರಾಕರಿಸಿದ್ದರು.
ಮೂರು ಬಾರಿ ಪ್ರಿಯತಮೆಗೆ ಗರ್ಭಪಾತ ಮಾಡಿಸಿದ್ದಾನೆ. ವಿಚಿತ್ರ ಹಾಗೂ ವಿಲಕ್ಷಣ ಪ್ರೇಮ್ ಕಹಾನಿಗೆ ಬಲಿಯಾಗಿ ಪ್ರಿಯತಮೆ ಹಾಗೂ ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ.
2021 ರಲ್ಲಿ ನರ್ಸಿಂಗ್ ಕೋರ್ಸ್ ಮಾಡುವ ವೇಳೆ ಕ್ಲಿಂಟನ್ ಎಂಬಾತನ ಜೊತೆ ಮಹಿಳೆ ಸ್ನೇಹ ಹೊಂದಿದ್ದರು. ಇಬ್ಬರು ಸಹ ಹಲವೆಡೆ ಸುತ್ತಾಟ ನಡೆಸಿದ್ದರು. ಇವರಿಬ್ಬರ ಪ್ರೀತಿ-ಪ್ರೇಮದ ಬಗ್ಗೆ ಮನೆಯವರಿಗೂ ಗೊತ್ತಾಗಿತ್ತು. ವಿಚಾರ ತಿಳಿದ ಪ್ರೇಯಸಿ ಕುಟುಂಬಸ್ಥರು ಕ್ಲಿಂಟನ್‌ನ ಮನೆಯವರಿಗೆ ವಿಚಾರ ತಿಳಿಸಿದ್ದರು. ಆದರೆ, ಕ್ಲಿಂಟನ್‌ಗೆ ಸಹೋದರಿ ಇದ್ದ ಕಾರಣ ಆಕೆಯ ವಿವಾಹ ಆಗುವವರೆಗೂ ಮದುವೆಗೆ ಕುಟುಂಬಸ್ಥರು ನಿರಾಕರಿಸಿದ್ದರು.
ಕ್ಲಿಂಟರ್ ಕುಟುಂಬಸ್ಥರು ವಿವಾಹಕ್ಕೆ ನಿರಾಕರಿಸಿದ್ದ ಕಾರಣ 2022 ರಲ್ಲಿ ತಮಿಳುನಾಡು ಮೂಲದ ಸ್ಟೀಫನ್ ರಾಜ್ ಜೊತೆ ಈಕೆಯ ವಿವಾಹ ನಡೆದಿತ್ತು. ವಿವಾಹದ ಬಳಿಕ ಮಾಜಿ ಪ್ರಿಯಕರ ಕ್ಲಿಂಟನ್, ಆಕೆಯ ಪ್ರೈವೇಟ್ ಫೋಟೊ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿದ್ದ. ಆಕೆಯ ಪತಿಗೂ ಫೋಟೊ ಕಳುಹಿಸಿ ಕಿರುಕುಳ ನೀಡಿದ್ದ.
ಪತ್ನಿಯ ಲವ್ ವಿಚಾರ ತಿಳಿದು ಆಕೆಯನ್ನು ಪತಿ ಮನೆಯಿಂದ ಆಚೆ ಹಾಕಿದ್ದ. ಈ ವೇಳೆ, ನಿನ್ನ ಪತಿಗೆ ವಿಚ್ಛೇದನ ನೀಡಿ ಬಾ ನಾನು ಮದ್ವೆ ಆಗುತ್ತೇನೆ ಪ್ರಿಯಕರ ಕ್ಲಿಂಟನ್ ಹೇಳಿದ್ದ. ವಿಚ್ಛೇದನ ಬಳಿಕ ಮದುವೆ ಆಗದೇ ಪ್ರೇಯಸಿ ಜೊತೆ 10 ತಿಂಗಳ ಸಂಸಾರ ನಡೆಸಿದ್ದ. ಆಕೆ ಜೊತೆ ಲೈಂಗಿಕ ಸಂಪರ್ಕ ಬೆಳೆಸಿ 3 ಬಾರಿ ಅಬಾರ್ಷನ್ ಮಾಡಿಸಿದ್ದ. ಇದೆ ಫೆ.12 ರಂದು ಕೊಳ್ಳೇಗಾಲದಲ್ಲಿ ಕ್ಲಿಂಟನ್ ಹಾಗೂ ಆತನ ಪ್ರೇಯಸಿಯ ರಿಜಿಸ್ಟರ್ ಮ್ಯಾರೇಜ್ ಫಿಕ್ಸ್ ಆಗಿತ್ತು.
ಆದರೆ, ರಿಜಿಸ್ಟರ್ ಮ್ಯಾರೇಜ್‌ಗೆ ಬಾರದೇ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಕ್ಲಿಂಟನ್ ಎಸ್ಕೇಪ್ ಆಗಿದ್ದಾನೆ. ಪರಾರಿಯಾದ ಕ್ಲಿಂಟನ್‌ನ ಹುಡುಕಿಕೊಡಿ ಎಂದು ನೊಂದ ಪ್ರಿಯತಮೆ ಕಣ್ಣೀರಿಟ್ಟಿದ್ದಾಳೆ. ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆಯಾಗಿದೆ.