News / Blog Details

  • Home
  • >
  • News / Blog Details

ಮಾದಪ್ಪನ ಸನ್ನಿದಿಯಲ್ಲಿ 3.26 ಕೋಟಿ ಕಾಣಿಕೆ ಸಂಗ್ರಹ

  • 10
img ಮಾದಪ್ಪನ ಸನ್ನಿದಿಯಲ್ಲಿ 3.26 ಕೋಟಿ ಕಾಣಿಕೆ ಸಂಗ್ರಹ
Font size:
Print

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ಮಾಡಲಾಗಿದ್ದು, ಈ ಬಾರಿಯೂ ಮಾದಪ್ಪ ಕೋಟಿ ಒಡೆಯನಾಗಿದ್ದಾನೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಹುಂಡಿ ಹಣ ಎಣಿಕೆಯಲ್ಲಿ ಈ ಬಾರಿ 35 ದಿನಗಳ ಅವಧಿಯಲ್ಲಿ ಬರೋಬ್ಬರಿ 3.26 ಕೋಟಿ ಕೋಟಿ ರೂ. ಸಂಗ್ರಹವಾಗಿದೆ. ಅಲ್ಲದೇ 47 ಗ್ರಾಂ ಚಿನ್ನ, 2 ಕೆಜಿ 200 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದೆ. ಇದರೊಂದಿಗೆ 11 ವಿದೇಶಿ ನೋಟುಗಳು, 2,000 ರೂ. ಮುಖಬೆಲೆಯ 20 ನೋಟುಗಳು ಕಂಡುಬಂದಿವೆ. ಸಾಲೂರು ಶ್ರೀಗಳ ನೇತೃತ್ವದಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯ ನಡೆಯಿತು.
 

No Reviews