News / Blog Details

  • Home
  • >
  • News / Blog Details

ಪುನೀತ್‌ ರಾಜ್‌ ಕುಮಾರ್‌ 50 ನೇ ಹುಟ್ಟುಹಬ್ಬ - ಸಾವಿರರು ಅಪ್ಪು ಅಭಿಮಾನಿಗಳಿಂದ ಸಮಾಧಿಗೆ ನಮನ

  • 34
img ಪುನೀತ್‌ ರಾಜ್‌ ಕುಮಾರ್‌ 50 ನೇ ಹುಟ್ಟುಹಬ್ಬ - ಸಾವಿರರು ಅಪ್ಪು ಅಭಿಮಾನಿಗಳಿಂದ ಸಮಾಧಿಗೆ ನಮನ
Font size:
Print

ಅಭಿಮಾನಿಗಳಿಂದ ಅಪ್ಪು ಎಂದು ಕರೆಯಿಸಿಕೊಳ್ಳುವ  ಡಾ/ಪುನೀತ್ ರಾಜ್ ಕುಮಾರ್ ಅವರ 50ನೇ ವರ್ಷದ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಬೆಂಗಳೂರಿನ ಕಂಠೀರವ ಸ್ಟುಡಿಯೋದ ಹಿಂಭಾಗದಲ್ಲಿರುವ ಅಪ್ಪು ಅವರ ಸಮಾಧಿಯ ದರ್ಶನಕ್ಕಾಗಿ ಸಾವಿರಾರು ಮಂದಿ ಆಗಮಿಸಿದ್ದಾರೆ. ದರ್ಶನ ಪಡೆದು ಬಂದವರು ಅಲ್ಲಿಯೇ ಅಪ್ಪು ಅವರ ಹಾಡುಗಳನ್ನು ಹಾಡುತ್ತಾ, ಅವರಿಗೆ ಜಯಕಾರ ಹಾಕುತ್ತಾ ಹೊರನಡೆಯುತ್ತಿರುವ ದೃಶ್ಯಗಳು ಕಂಡುಬರುತ್ತಿವೆ.
1975 ಮಾರ್ಚ್‌ 17 ರಂದು ಜನಿಸಿದ್ದ ಪುನೀತ್‌ ರಾಜ್‌ ಕುಮಾರ್‌ 2021ರ ಅಕ್ಟೋಬರ್‌ 29 ರಂದು ಹೃದಯಾಘಾತದಿಂದ ನಿಧನರಾಗಿದ್ದರು. ಇಂದು ಅವರ ಜನ್ಮದಿನವಾಗಿರುವುದು ಗೊತ್ತಿದ್ದರಿಂದ ಸಾವಿರಾರು ಅಭಿಮಾನಿಗಳು ಮಾರ್ಚ್‌ 16ರ ರಾತ್ರಿಯಿಂದಲೇ ಕಂಠೀರವ ಸ್ಟುಡಿಯೋ ಗೇಟ್‌ ಮುಂದೆ ಜಮಾಯಿಸಿದ್ದರು.

ಕುಟುಂಬಸ್ಥರಿಂದ ಪೂಜೆ
ಬೆಳಗ್ಗೆ ಸುಮಾರು 8 ಗಂಟೆ ಸುಮಾರಿಗೆ ಸಮಾಧಿ ಸ್ಥಳಕ್ಕೆ ಆಗಮಿಸಿದ ಪುನೀತ್ ರಾಜ್ ಕುಮಾರ್ ಅವರ ಕುಟುಂಬಸ್ಥರಿಂದ ಪೂಜೆ ನೆರವೇರಿಸಿದ್ದಾರೆ. ಅವರಲ್ಲಿ ಪುನೀತ್ ಅವರ ಪತ್ನಿ, ಮಗಳು, ಪುನೀತ್ ಅವರ ಅಕ್ಕಂದಿರು ಇದ್ದರು. ಪುನೀತ್ ಅವರಿಗೆ ಇಷ್ಟವಾದ ತಿಂಡಿ, ತಿನಿಸುಗಳನ್ನು ಮಾಡಿಕೊಂಡು ಅವರು ಬಂದು ಅವುಗಳನ್ನು ಬಾಳೆ ಎಲೆಯ ಮೇಲೆ ಇಟ್ಟು, ತಾವು ತಂದಿದ್ದ ಹೂವಿನ ಹಾರಗಳನ್ನು ಹಾಕಿ, ದೀಪ ಹಚ್ಚಿ, ಸಮಾಧಿಗೆ ಗಂಧದ ಕಡ್ಡಿ ಬೆಳಗಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಅಭಿಮಾನಿಗಳು ಪುನೀತ್ ರಾಜ್ ಕುಮಾರ್ ಅರಜಾರಮರ ಎಂಬ ಘೋಷಣೆಗಳನ್ನು ಕೂಗಿದರು

No Reviews