News / Blog Details

  • Home
  • >
  • News / Blog Details

ಧನುಷ್‌ ಶೂಟಿಂಗ್‌ ಸೆಟ್‌ನಲ್ಲಿ ಬೆಂಕಿ ಅವಘಡ

  • 13
img ಧನುಷ್‌ ಶೂಟಿಂಗ್‌ ಸೆಟ್‌ನಲ್ಲಿ ಬೆಂಕಿ ಅವಘಡ
Font size:
Print

ಚೆನ್ನೈ: ಕಾಲಿವುಡ್ ನಟ ಧನುಷ್ ಅವರ ಸಿನಿಮಾ ಚಿತ್ರೀಕರಣದ ಸೆಟ್‌ನಲ್ಲಿ ಬೆಂಕಿ ಅವಘಡವಾಗಿರುವ ಘಟನೆ ನಡೆದಿದೆ. ಧನುಷ್ ಅವರ 'ಇಡ್ಲಿ ಕಡೈ' ಚಿತ್ರೀಕರಣದ ಸೆಟ್‌ನಲ್ಲಿ ಭಾರೀ ಪ್ರಮಾಣದಲ್ಲಿ ಬೆಂಕಿ ಅವಘಡ ಉಂಟಾಗಿದೆ. ತಮಿಳುನಾಡಿನ ಅಂಡಿಪಟ್ಟಿ ಬ್ಲಾಕ್‌ನಲ್ಲಿರುವ ಅನುಪ್ಪಪಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿರುವುದು ವರದಿಯಾಗಿದೆ. ಘಟನೆಗೂ ಮುನ್ನ ಚಿತ್ರತಂಡ ಇಲ್ಲಿ ಚಿತ್ರೀಕರಣ ಮುಗಿಸಿ ತೆರಳಿತ್ತು. ಆ ಕಾರಣದಿಂದ ಯಾರಿಗೂ ಹಾನಿ ಉಂಟಾಗಿಲ್ಲ. ಈ ಬೆಂಕಿ ಅವಘಡಕ್ಕೆ ಕಾರಣ ಏನು ಎನ್ನುವುದು ಇನ್ನೂ ತಿಳಿದುಬಂದಿಲ್ಲ ಎಂದು ವರದಿ ತಿಳಿಸಿದೆ.. ಇನ್ನು ಬೆಂಕಿಯಿಂದ ಉಂಟಾದ ಹಾನಿ ಅಥವಾ ನಷ್ಟದ ಬಗ್ಗೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದ್ದು, 'ಇಡ್ಲಿ ಕಡೈ' ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿರುವ ಬಹು ನಿರೀಕ್ಷಿತ ಸಿನಿಮಾವಾಗಿದೆ. ಧನುಷ್ ಚಿತ್ರವನ್ನು ನಿರ್ದೇಶನ ಮಾಡುವುದರ ಜತೆಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿಯಾಗಿ ನಿತ್ಯಾ ಮೆನನ್ ಕಾಣಿಸಿಕೊಳ್ಳಲಿದ್ದಾರೆ.                      
 

No Reviews