News / Blog Details

  • Home
  • >
  • News / Blog Details

ಅಪಾಟ್ಮೆಂಟ್‌ನಲ್ಲಿ ಒಂದೇ ಕುಟುಂಬದ ನ್ವಾವರು ಆತ್ಮಹತ್ಯೆ

  • 80
img ಅಪಾಟ್ಮೆಂಟ್‌ನಲ್ಲಿ ಒಂದೇ ಕುಟುಂಬದ ನ್ವಾವರು ಆತ್ಮಹತ್ಯೆ
Font size:
Print

ಮೈಸೂರು : ಒಂದೇ ಕುಟುಂಬದ ನಾಲ್ವರು ಮೃತಟ್ಟಿರುವ ಘಟನೆ ಮೈಸೂರಿನ ವಿಶ್ವೇರಯ್ಯನಗರದ ಅಪಾಟ್ಮೆಂಟ್‌ನಲ್ಲಿ ನಡೆದಿದೆ.

ಕುಶಾಲ್(15‌), ಚೇತನ್‌ (45), ರೂಪಾಲಿ (43),ಪ್ರಿಯಂವಧಾ (62) ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ.

ಮೃತ ಚೇತನ್‌ ಮಾದಲಿಗೆ  ತಾಯಿ ಪತ್ನಿ ಹಾಗು ಕುಶಾಲ್ ಗೆ ವಿಷವುಣಿಸಿ ನಂತರ ಚೇತನ್‌ ನೇಣುಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ಮೈಸೂರು ಪೊಲೀಸ್‌ ಕಮಿಷನರ್‌ ಸೀಮಾ ಲಾಟ್ಕರ್‌,ಡಿ ಸಿ ಪಿ ಜಾಹ್ನವಿ , ವಿದ್ಯಾರಣ್ಯಪುರಂ ಇನ್ಸ್‌ಪೆಕ್ಟ್‌ರ್‌ ಮೋಹಿತ್‌ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಾಯಿಸಿ ತನಿಖೆ ನಡೆಸುತ್ತಿದ್ದಾರೆ.ಘಟನೆಗೆ ಇನ್ನು ನಿಕರ ಕಾರಣ ತಿಳಿದು ಬಂದಿಲ್ಲ.

ಚೇತನ್ ಕುಟುಂಬ ಹಾಗೂ ಚೇತನ್​ ತಾಯಿ ಪ್ರಿಯಂವಧಾ ಅಕ್ಕಪಕ್ಕದ ಫ್ಲ್ಯಾಟ್​ನಲ್ಲಿ ವಾಸವಿದ್ದರು. ತಾಯಿ ಒಂದು ಕಡೆ ಇದ್ದರು, ಮಗ ಇನ್ನೊಂದು ಕಡೆ ಇದ್ದರು. ತಾಯಿ ಪ್ರಿಯಂವಧಾ ಮತ್ತು ಮಗ ಚೇತನ್ ಕುಟುಂಬ ಒಟ್ಟಾಗಿ ಭಾನುವಾರ ಗೊರೂರಿಗೆ ಹೋಗಿದ್ದರು ಎಂದು ತಿಳಿಸಿದರು. ಡಿ ಸಿ ಪಿ ತಿಳಿಸಿದ್ದಾರೆ.

ಗೊರೂರು ದೇವಸ್ಥಾನಕ್ಕೆ ಹೋಗಿ ಸಂಜೆ ಮನೆಗೆ ಬಂದಿದ್ದರು. ಮೃತ ಚೇತನ್ ಹಾಸನ ಜಿಲ್ಲೆ ಗೊರೂರು ಮೂಲದ ನಿವಾಸಿಯಾಗಿದ್ದರು. ಚೇತನ್ ಪತ್ನಿ ರೂಪಾಲಿ ಮೈಸೂರಿನ ನಿವಾಸಿಯಾಗಿದ್ದರು. 2019 ರಿಂದ ಚೇತನ್ ಮತ್ತು ರೂಪಾಲಿ ಮೈಸೂರಿನಲ್ಲೇ ನೆಲೆಸಿದ್ದರು. ಕೇಸ್ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದೇವೆ. ಚೇತನ್​​ ಕಾರ್ಮಿಕರನ್ನು ಸೌದಿಗೆ ಕಳಿಸುವ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. 

No Reviews