ಬೆಂಗಳೂರು: ತಾವರೆಕೆರೆ ಮುಖ್ಯ ರಸ್ತೆಯ ನಿನ್ನೆ ನಗರದ ಜಿ.ಎಸ್. ಸೂಟ್ಸ್ ಹೋಟೆಲ್‌ನಲ್ಲಿ ಕನ್ನಡಿಗರನ್ನು ಕುರಿತು ಅಶ್ಲೀಲ ಮತ್ತು ಅಪಮಾನಕರ ಸಂದೇಶಗಳನ್ನು ಪ್ರದರ್ಶಿಸಿದ ಆರೋಪದ ಮೇಲೆ ಪೊಲೀಸರು ಕಟ್ಟುಕ್ರಮ ಕೈಗೊಂಡಿದ್ದಾರೆ. ಸದ್ಯ ಹೋಟೆಲ್ ಸೀಜ್ ಮಾಡಲಾಗಿದ್ದು, ಹೋಟೆಲ್ ಮ್ಯಾನೇಜರ್ ಸರ್ಫಜ್ ಎಂಬಾತನನ್ನು ಬಂಧಿಸಲಾಗಿದೆ. ಅಷ್ಟೇ ಅಲ್ಲದೆ ಹೋಟೆಲ್ ಮಾಲೀಕ ಜಮ್ಸದ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.. ಕೋರಮಂಗಲದ ನೆಕ್ಸಸ್ ಮಾಲ್ ಸಮೀಪದಲ್ಲಿ ಜಿ.ಎಸ್.ಸೂಟ್ ಹೋಟೆಲ್ ಇದ್ದು, ಈ ಹೋಟೆಲ್ನ ಹೊರಭಾಗದ ಡಿಸ್ಪ್ಲೇ ಬೋರ್ಡ್ನಲ್ಲಿ ನಿನ್ನೆ ರಾತ್ರಿ ಅವಹೇಳನಕಾರಿ ಬರಹ ಪ್ರದರ್ಶಿಸಿದ್ದರು. ಅದನ್ನ ಗಮನಿಸಿದ ಸ್ಥಳೀಯರು ವಿಡಿಯೋ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾರೆ. ಬಳಿಕ ವಿಡಿಯೋ ನೋಡ್ತಿದ್ದಂತೆ ಕನ್ನಡಿಗರು ಕೆರಳಿ ಕೆಂಡವಾಗಿದ್ದಾರೆ. ಈ ವೇಳೆ ತಕ್ಷಣ ಅಲರ್ಟ್ ಆದ ಮಡಿವಾಳ ಪೊಲೀಸರು ಹೋಟೆಲ್ಗೆ ಬಂದು ಪರಿಶೀಲನೆ ಮಾಡಿದ್ದಾರೆ. ಹೋಟೆಲ್ ಸಿಬ್ಬಂದಿ ಅಬ್ದುಲ್ ಸಮಾದ್ ಹಾಗೂ ಮ್ಯಾನೇಜರ್ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದರು. ಜೊತೆಗೆ ಡಿಸ್ಪ್ಲೇ ಬೋರ್ಡ್ ವಶಕ್ಕೆ ಪಡೆದು, ಹೋಟೆಲ್ ಮೇಲೆ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ. ಕಳೆದ ಮೂರು ವರ್ಷದಿಂದ ಕೋರಮಂಗಲದ ಓರ್ವ ವ್ಯಕ್ತಿ ಈ ಡಿಸ್ಪ್ಲೇ ಬೋರ್ಡ್ ನಿರ್ವಹಣೆ ಮಾಡ್ತಿದ್ದಾರಂತೆ. ಡಿಸ್ಪ್ಲೇ ಕಂಟ್ರೋಲರ್ ಯಾರೋ ಹ್ಯಾಕ್ ಮಾಡಿದ್ದಾರೆ ಎಂದು ಮಾಲೀಕರು ಹೇಳಿದ್ದಾರೆ. ಆದರೆ ಪೊಲೀಸರ ತನಿಖೆ ನಂತರವೇ ಅಸಲಿ ಸತ್ಯ ಹೊರಬರಬೇಕಿದೆ. ಕನ್ನಡಿಗರಿ ಅವಮಾನ ಮಾಡಿದ ಕಿಡಿಗೇಡಿಗಳಿಗೆ ಕನ್ನಡದ ಪಾಠ ಮಾಡಬೇಕಿದೆ.
ಜಿ.ಎಸ್ ಸೂಟ್ಸ್ ಹೋಟೆಲ್ ಮ್ಯಾನೇಜರ್ ಬಂಧನ
2025-05-18 12:13:18- 79