ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಇಬ್ಬರು ಬಾಲಕರ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಹುಬ್ಬಳ್ಳಿಯ ಮೂರು ಸಾವಿರ ಮಠದ ಬಳಿ ನಡೆದಿದೆ. 15 ವರ್ಷ ಬಾಲಕನನ್ನ ಸ್ನೇಹಿತನೇ ಚಾಕುವಿನಿಂದ ಇರಿದು ನಿನ್ನೆ ರಾತ್ರಿ ಕೊಲೆ ಮಾಡಿದ್ದಾನೆ. 15 ವರ್ಷದ ಚೇತನ್ ಆತನ ಸ್ನೇಹಿತ 13 ವರ್ಷದ ಬಾಲಕ ಕೊಲೆ ಮಾಡಿದ್ದಾನೆ. ಈ ಇಬ್ಬರ ನಡುವೆ ಉಂಟಾದ ಚಿಕ್ಕ ಜಗಳದ ವೇಳೆ ಏಕಾಏಕಿ 13 ವರ್ಷದ ಬಾಲಕ ಚೇತನ್‌ಗೆ ಚಾಕು ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ಚೇತನ್‌ನನ್ನ ಹುಬ್ಬಳ್ಳಿ ಕಿಮ್ಸ್‌ಗೆ ರವಾನಿಸಲಾಗಿದೆ. ಆದ್ರೆ ಮಾರ್ಗಮಧ್ಯದಲ್ಲಿಯೇ ಚೇತನ್ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಹುಬ್ಬಳ್ಳಿಯ ಕಮರಿಪೇಟ ಪೊಲೀಸರು ಹಾಗೂ ಕಮಿಷನರ್ ಎನ್. ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ 15 ವರ್ಷದ ಬಾಲಕನ ಹತ್ಯೆ, ಸ್ನೇಹಿತರ ಜಗಳ ಕೊಲೆಯಲ್ಲಿ ಅಂತ್ಯ
2025-05-13 15:43:16- 71