ಗುವಾಹಾಟಿ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ 60 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಶಿರಚ್ಛೇದ ಮಾಡಿ, ಆಕೆಯ ಕತ್ತರಿಸಿದ ತಲೆಯನ್ನು ತೆಗೆದುಕೊಂಡು ಹೋಗಿ ಪೊಲೀಸರ ಮುಂದೆ ಶರಣಾಗಿರುವ ಭೀಕರ ಘಟನೆ ಅಸ್ಸಾಂನ ಚಿರಾಂಗ್ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ನಡೆದಿದೆ. ಬಿತೀಶ್ ಹಜೋಂಗ್ ಹತ್ಯೆ ಮಾಡಿದ್ದು, ಪತ್ನಿಯನ್ನು ಹತ್ಯೆ ಮಾಡಲು ಹರಿತವಾದ ಆಯುಧವನ್ನು ಬಳಸಿ ಪತ್ನಿಯ ತಲೆಯನ್ನು ಕತ್ತರಿಸಿದ್ದಾನೆ.. ಇನ್ನು ಪತ್ನಿಯನ್ನ ಕೊಲೆ ಮಾಡಿದ ಬಳಿಕ ಸೈಕಲ್ ಪತ್ನಿಯ ಬುಟ್ಟಿಯಲ್ಲಿ ತಲೆಯನ್ನು ತೆಗೆದುಕೊಂಡು ಹೋಗಿ ಪೊಲೀಸರಿಗೆ ಶಾರಣಾಗಿದ್ದಾನೆ.. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆರೋಪಿಯು ಚಿರಾಂಗ್ ಜಿಲ್ಲೆಯನಾಗಿದ್ದು, ಕೂಲಿ ಕೆಲಸ ಮಾಡುತ್ತಿದ್ದ. ಕೌಟುಂಬಿಕ ಸಮಸ್ಯೆಗಳಿಂದ ತನ್ನ ಪತ್ನಿ ತಲೆ ಕತ್ತರಿಸಿದ್ದಾನೆ ಅಂತಾ ಪೊಲೀಸ್ ಮೂಲಗಳು ತಿಳಿಸಿವೆ.. ಶನಿವಾರ ರಾತ್ರಿ ಬಿತೀಶ್ ಹಜೋಂಗ್ ಕೆಲಸದಿಂದ ಮನೆಗೆ ಬಂದ ನಂತರ ಈ ಘಟನೆ ನಡೆದಿದೆ ಎಂದು ನೆರೆಹೊರೆಯವರು ತಿಳಿಸಿದ್ದಾರೆ. ಗಂಡ ಮತ್ತು ಹೆಂಡತಿ ಇಬ್ಬರೂ ಪ್ರತಿದಿನ ಸಣ್ಣಪುಟ್ಟ ವಿಷಯಗಳಿಗೆ ಜಗಳವಾಡುತ್ತಿದ್ದರು ಎಂದು ಹೇಳಿದರು.
ಪತ್ನಿಯ ತಲೆ ಕಡಿದು, ರುಂಡದೊಂದಿಗೆ ಪತಿ ಪೊಲೀಸರಿಗೆ ಶರಣು
2025-04-20 16:04:23- 7