News / Blog Details

  • Home
  • >
  • News / Blog Details

ಭಾರತದ ಇಂಡಿಗೋ ವಿಶ್ವದ ಅತಿಮೌಲ್ಯಯುತ ಏರ್​ಲೈನ್ಸ್ ಕಂಪನಿ

  • 13
img ಭಾರತದ ಇಂಡಿಗೋ ವಿಶ್ವದ ಅತಿಮೌಲ್ಯಯುತ ಏರ್​ಲೈನ್ಸ್ ಕಂಪನಿ
Font size:
Print

20 ವರ್ಷದ ಹಿಂದೆ ಸ್ಥಾಪನೆಯಾದ ಭಾರತದ ಇಂಡಿಗೋ ಏರ್​ಲೈನ್ಸ್ ವಿಶ್ವದ ಅತಿದೊಡ್ಡ ವಿಮಾನ ಸಂಸ್ಥೆಗಳಲ್ಲಿ ಒಂದೆನಿಸಿದೆ. ಮಾರುಕಟ್ಟೆ ಮೌಲ್ಯದಲ್ಲಿ ಅದು ವಿಶ್ವದ ಅತಿದೊಡ್ಡ ಏರ್​ಲೈನ್ಸ್ ಎನಿಸಿದೆ. ಈ ವರ್ಷ ಮಾರುಕಟ್ಟೆ ಕುಸಿದರೂ ಇಂಡಿಗೋ ಏರ್ಲೈನ್ಸ್ ಷೇರು ಬೆಲೆ ಹೆಚ್ಚಿದ್ದು ಅದರ ಮಾರುಕಟ್ಟೆ ಸಂಪತ್ತು 2 ಲಕ್ಷ ಕೋಟಿ ರೂ ದಾಟಿದೆ.
 ಭಾರತದ ಅತಿದೊಡ್ಡ ಏರ್ಲೈನ್ಸ್ ಎನಿಸಿರುವ ಇಂಡಿಗೋ  ಹೊಸ ದಾಖಲೆ ಮಾಡಿದೆ. ವಿಶ್ವದಲ್ಲೇ ಅತಿಹೆಚ್ಚು ಮಾರುಕಟ್ಟೆ ಮೌಲ್ಯ  ಹೊಂದಿದ ಏರ್ಲೈನ್ಸ್ ಎನ್ನುವ ದಾಖಲೆ ಇಂಡಿಗೋ ಹೆಸರಲ್ಲಿ ದಾಖಲಾಯಿತು. ಅಮೆರಿಕದ ಡೆಲ್ಟಾ ಏರ್​​ಲೈನ್ , ಐರ್ಲೆಂಡ್​​ನ ರಯಾನ್​​ಏರ್ ಹೋಲ್ಡಿಂಗ್ಸ್ ಸಂಸ್ಥೆಗಳ ಮಾರುಕಟ್ಟೆ ಮೌಲ್ಯವನ್ನೂ ಮೀರಿಸಿತು ಇಂಡಿಗೋ. ಬುಧವಾರ ಕೆಲ ಹೊತ್ತಿನವರೆಗೂ ಈ ದಾಖಲೆ ಇಂಡಿಗೋ ಹೆಸರಲ್ಲಿ ಇತ್ತು. ಒಂದು ಹಂತದಲ್ಲಿ ಇದರ ಮಾರುಕಟ್ಟೆ ಮೌಲ್ಯ 23 ಬಿಲಿಯನ್ ಡಾಲರ್ ದಾಟಿ ಹೋಗಿತ್ತು.

ಕಡಿಮೆ ದರದಲ್ಲಿ ವಿಮಾನ ಪ್ರಯಾಣ ಸೇವೆ ಒದಗಿಸುವ ಇಂಡಿಗೋ ಈ ವರ್ಷ ಶೇ. 13ರಷ್ಟು ಷೇರು ಮೌಲ್ಯ ಹೆಚ್ಚಿಸಿಕೊಂಡಿದೆ. ಮಾರುಕಟ್ಟೆ ಕುಸಿತ ಕಂಡರೂ ಇಂಡಿಗೋ ಮೌಲ್ಯ ಹೆಚ್ಚಿಸಿಕೊಂಡಿದ್ದು ಗಮನಾರ್ಹ. 5,195 ರೂ ಷೇರುಬೆಲೆ ಹೊಂದಿದ್ದು, ಈ ವರ್ಷ 600 ರೂ ಮೌಲ್ಯ ಹೆಚ್ಚಳ ಆಗಿದೆ. ಅದರ ಒಟ್ಟು ಮಾರುಕಟ್ಟೆ ಮೌಲ್ಯ 2.01 ಲಕ್ಷ ಕೋಟಿ ರೂನಷ್ಟಿದೆ.

No Reviews