News / Blog Details

  • Home
  • >
  • News / Blog Details

ಪಾಕಿಸ್ತಾನದ ಡ್ರೋನ್‌ ಲಾಂಚ್‌ ಪ್ಯಾಡ್‌ ಉಡೀಸ್‌ ಮಾಡಿದ ಭಾರತೀಯ ಸೇನೆ

  • 68
img ಪಾಕಿಸ್ತಾನದ ಡ್ರೋನ್‌ ಲಾಂಚ್‌ ಪ್ಯಾಡ್‌ ಉಡೀಸ್‌ ಮಾಡಿದ ಭಾರತೀಯ ಸೇನೆ
Font size:
Print

ಹೊಸದಿಲ್ಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧಾತಂಕ ಮುಂದುವರಿದಿದೆ. ಪಾಕಿಸ್ತಾನಿ ಸೇನೆಯು ಭಾರತದ ವಿರುದ್ಧ ನಡೆಸಿದ ಡ್ರೋನ್ ದಾಳಿಗೆ ಭಾರತವು ತಿರುಗೇಟು ನೀಡಿದ್ದು, ಜಮ್ಮುವಿನ ಬಳಿಕ ಪಾಕಿಸ್ತಾನಿ ಲಾಂಚ್ ಪ್ಯಾಡ್ ಧ್ವಂಸ ಮಾಡಲಾಗಿದೆ. ರಕ್ಷಣಾ ಮೂಲಗಳ ಪ್ರಕಾರ, ಜಮ್ಮು ಪ್ರದೇಶದ ಬಳಿ ಪಾಕಿಸ್ತಾನದ ಹಲವಾರು ಭಯೋತ್ಪಾದಕ ನೆಲೆಗಳು ಮತ್ತು ಭಯೋತ್ಪಾದಕ ಲಾಂಚ್ ಪ್ಯಾಡ್‌ಗಳನ್ನು ಭಾರತೀಯ ಸೇನೆ ನಾಶಪಡಿಸಿದೆ. ಇವುಗಳನ್ನು ಭಾರತದ ಭೂಪ್ರದೇಶದೊಳಗೆ ಉಡಾವಣೆ ಮಾಡುವ ಡೋನ್‌ಗಳನ್ನು ಉಡಾಯಿಸಲು ಬಳಸಲಾಗುತ್ತಿತ್ತು. ನಿಯಂತ್ರಣ ರೇಖೆಯಾಚೆಯಿಂದ ಪದೇ ಪದೇ ಡ್ರೋನ್ ಅತಿಕ್ರಮಣ ಮತ್ತು ಶೆಲ್ ದಾಳಿ ನಡೆದ ನಂತರ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆ ಈ ಕ್ರಮ ಕೈಗೊಳ್ಳಲಾಗಿದೆ. ನಿನ್ನೆ ಭಾರತ ಪಶ್ಚಿಮ ಗಡಿಯ ಜಮ್ಮು ಕಾಶ್ಮೀರ, ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್ ನ ಒಟ್ಟು 36 ನಗರಗಳನ್ನು ಗುರಿಯಾಗಿಸಿ ಡ್ರೋನ್ ಹಾರಿಸಿತ್ತು. ಗುರಿಗಳಲ್ಲಿ ಅವಂತಿಪೋರಾದಲ್ಲಿರುವ ವಾಯುನೆಲೆಯೂ ಸೇರಿದ್ದು, ಇತರ ದಾಳಿ ಪ್ರಯತ್ನಗಳ ಜೊತೆಗೆ, ಭಾರತೀಯ ರಕ್ಷಣಾ ವ್ಯವಸ್ಥೆಗಳು ಇದನ್ನು ಯಶಸ್ವಿಯಾಗಿ ವಿಫಲಗೊಳಿಸಿದವು. ಡ್ರೋನ್ ನಾಶಮಾಡುವ ಪ್ರಯತ್ನದ ಸಮಯದಲ್ಲಿ 15-20 ಸ್ಫೋಟಗಳು ಕೇಳಿಬಂದವು ಎಂದು ಮೂಲಗಳು ತಿಳಿಸಿವೆ. ಜಮ್ಮು, ಸಾಂಬಾ, ರಚೌರಿ, ಪಠಾಣ್ ಕೋಟ್, ಅಮೃತ್ ಸರ, ಬಾರ್ಮರ್, ಜೈಸಲ್ಮರ್ ಮತ್ತು ಪೋಟ್ರಾನ್ ಗೆ ಹಲವು ಡೋನ್ ಗಳು ಹಾರಿ ಬಂದಿದ್ದವು. ಇದೇ ಸಮಯದಲ್ಲಿ ಲೈನ್ ಆಫ್ ಕಂಟ್ರೋಲ್ ನ ಪ್ರದೇಶಗಳಾದ ಕುಪ್ಪಾರ, ಪೂಂಚ್, ಉರಿ, ಹಂದ್ವಾರ ಪ್ರದೇಶಗಳಲ್ಲಿ ಭಾರೀ ಫಿರಂಗಿ ದಾಳಿಗಳು ನಡೆದವು ಎಂದು ವರದಿಯಾಗಿದೆ. ಭಾರತೀಯ ಸೇನೆ ಪ್ರತ್ಯುತ್ತರ ನೀಡಿದೆ.
 

No Reviews