News / Blog Details

  • Home
  • >
  • News / Blog Details

ಭಾರತೀಯ ನೌಕಾಪಡೆ ಅಧಿಕಾರಿ ಮೇಲೆ ಉಗ್ರರ ಅಟ್ಟಹಾಸ

  • 8
img ಭಾರತೀಯ ನೌಕಾಪಡೆ ಅಧಿಕಾರಿ ಮೇಲೆ ಉಗ್ರರ ಅಟ್ಟಹಾಸ
Font size:
Print

ಜಮ್ಮು ಕಾಶ್ಮೀರ: ಕಣಿವೆ ನಾಡಿನಲ್ಲಿ ಉಗ್ರರು ಮತ್ತೆ ಪೈಶಾಚಿಕ ಕೃತ್ಯ ನಡೆಸಿದ್ದಾರೆ. ಒಬ್ಬರಲ್ಲ, ಇಬ್ಬರಲ್ಲ ಒಟ್ಟು 26 ಪ್ರವಾಸಿಗರ ಮೇಲೆ ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿ ಜೀವ ತೆಗೆದಿದ್ದಾರೆ. ಭೀಕರ ಕೃತ್ಯದಲ್ಲಿ ಗಾಯಗೊಂಡವರು ಅದೆಷ್ಟೋ. ಈ ರಾಕ್ಷಸೀ ಕೃತ್ಯದಲ್ಲಿ ಓರ್ವ ದೇಶ ಸೇವಕ ನೌಕಾಸೇನಾ ಸಿಬ್ಬಂದಿ ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ಬೇಸರ ವಿಚಾರ ಏನೆಂದರೆ ಅವರಿಗೆ ಕೇವಲ 7 ದಿನದ ಹಿಂದಷ್ಟೇ ಮದುವೆ ಆಗಿತ್ತು.. ಹನಿಮೂನ್ ಅಂತಾ ಬಂದು ಜೀವ ಕಳೆದುಕೊಂಡಿದ್ದಾರೆ.. ಹೆಸರು ವಿನಯ್ ನರ್ವಾಲ್ ಜೀವ ಕಳೆದುಕೊಂಡ ನೌಕಾಪಡೆಯ ಅಧಿಕಾರಿ. ವಯಸ್ಸು ಕೇವಲ 26. ಕಳೆದ 7 ದಿನಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟದ್ದರು. ಏಪ್ರಿಲ್ 19ಕ್ಕೆ ಆರತಕ್ಷತೆ ಮುಗಿಸಿದ್ದ ನರ್ವಾಲ್ ದಂಪತಿ, ನಂತರ ಹನಿಮೂನ್​​ಗೆ ಅಂತಾ ಜಮ್ಮು-ಕಾಶ್ಮೀರಕ್ಕೆ ತೆರಳಿತ್ತು. ಅಂತೆಯೇ ಅನಂತಪುರ ಜಿಲ್ಲೆಯ ಪಹಲ್ಗಾಮ್​​ನಲ್ಲಿ ಇಬ್ಬರು ಭೇಲ್ ಪುರಿ ತಿನ್ನುತ್ತಿದ್ದಾಗ ಪೈಶಾಚಿಕ ಕೃತ್ಯ ನಡೆದಿದೆ. ಇದೇ ಶಾಕ್​ನಲ್ಲಿ ಮಾತಾಡಿದ ವಿನಯ್ ನರ್ವಾಲ್ ಪತ್ನಿ, ನಾವು ಭೇಲ್ ಪುರಿ ತಿನ್ನುತ್ತಿದ್ದೆವು. ಅಲ್ಲಿಗೆ ಬಂದ ಉಗ್ರ ಪತಿಯ ಮೇಲೆ ದಾಳಿ ಮಾಡಿದ ಎಂದು ಕಣ್ಣೀರು ಇಟ್ಟಿದ್ದಾಳೆ. ಮೃತ ವಿನಯ್​ ನರ್ವಾಲ್ ನೌಕಾಪಡೆಯ ಅಧಿಕಾರಿ. ಕಳೆದ ಎರಡು ವರ್ಷಗಳಿಂದ  ಕೊಚ್ಚಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಏಪ್ರಿಲ್ 16 ರಂದು ವಿನಯ್​ ನರ್ವಾಲ್​ ಮದುವೆ ಆಗಿದ್ದರು.
 

No Reviews