Font size:
Print
ಬೆಂಗಳೂರು: ಆಟ ಆಡುತಿದ್ದ ಮಗು ಮೇಲೆ ಜೆ ಸಿ ಬಿ ಹರಿದು ಮಗು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಮಹೇದಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಡುಗೋಡಿಯಲ್ಲಿ ನಡೆದಿದೆ.
ಥವನ್ ರೆಡ್ಡಿ (2) ಮೃತ ದುದೈವಿ ಮಗು. ಚಾಲಕ ಜೆಸಿಬಿಯನ್ನು ಅತಿ ವೇಗವಾಗಿ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ಮನೆ ಮುಂದೆ ಆಟವಾಡುತ್ತಿದ್ದ ಮಗು ಮೇಲೆ ಹರಿದಿದೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ರವಾನಿಸಿದರು ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತ ಪಟ್ಟಿದೆ. ಮಹದೇವಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.