News / Blog Details

  • Home
  • >
  • News / Blog Details

ಸುಪ್ರೀಂ ಕೋರ್ಟ್​ನ ಮುಖ್ಯ ನ್ಯಾಯಮೂರ್ತಿಯಾಗಿ BR ಗವಾಯಿ ಪ್ರಮಾಣ ವಚನ ಸ್ವೀಕಾರ

  • 42
img ಸುಪ್ರೀಂ ಕೋರ್ಟ್​ನ ಮುಖ್ಯ ನ್ಯಾಯಮೂರ್ತಿಯಾಗಿ BR ಗವಾಯಿ ಪ್ರಮಾಣ ವಚನ ಸ್ವೀಕಾರ
Font size:
Print

ಸುಪ್ರೀಂಕೋರ್ಟ್​ನ 52ನೇ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ನ್ಯಾ.ಭೂಷಣ ರಾಮಕೃಷ್ಣ ಗವಾಯಿ ಅವರು ಇಂದು ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ನ್ಯಾಯಮೂರ್ತಿ ಬಿಆರ್ ಗವಾಯಿ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣ ವಚನ ಬೋಧಿಸಿದರು. ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಿ ಮೋದಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸೇರಿದಂತೆ ಕೇಂದ್ರ ಸಚಿವ ಸಂಪುಟದ ಇತರೆ ಸಚಿವ ಸದಸ್ಯರು ಹಾಜರಿದ್ದರು. ಇನ್ನು ನೂತನ ನ್ಯಾಯಮೂರ್ತಿಗಳಿಗೆ ಮಾಜಿ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಶುಭ ಕೋರಿದರು. ಇದಕ್ಕೂ ಮೊದಲು ಸುಪ್ರೀಂಕೋರ್ಟ್​ನ 51ನೇ ಮುಖ್ಯ ನ್ಯಾಯಮೂರ್ತಿ ಆಗಿ ಸಂಜೀವ್ ಖನ್ನಾ ಅವರು ಕರ್ತವ್ಯ ನಿರ್ವಹಿಸಿದ್ದರು. ಇವರ ಅವಧಿ 11 ನವೆಂಬರ್ 2024 ರಿಂದ 13 ಮೇ 2025ರ ವರೆಗೆ ಮಾತ್ರ ಇತ್ತು. ಖಾಲಿಯಾಗಿದ್ದ ಈ ಅತ್ಯುನ್ನತ ಹುದ್ದೆಗೆ ಮುಖ್ಯ ನ್ಯಾಯಮೂರ್ತಿ ಆಗಿ ನ್ಯಾ.ಭೂಷಣ ರಾಮಕೃಷ್ಣ ಗವಾಯಿ ಅವರು ಆಯ್ಕೆ ಆಗಿದ್ದು, ಇಂದು ಅಧಿಕಾರ ತೆಗೆದುಕೊಂಡಿದ್ದಾರೆ. ನ್ಯಾಯಮೂರ್ತಿ ಬಿಆರ್ ಗವಾಯಿ ಅವರು ಕೇವಲ 6 ತಿಂಗಳು ಮಾತ್ರ ಈ ಉನ್ನತ ಸ್ಥಾನದಲ್ಲಿ ಇರುತ್ತಾರೆ. ಅಂದರೆ 2025ರ ನವೆಂಬರ್​ನಲ್ಲಿ ವೃತ್ತಿಯಿಂದ ಗವಾಯಿ ಅವರು ನಿವೃತ್ತರಾಗುತ್ತಾರೆ. ನಂತರ ಈ ಸ್ಥಾನಕ್ಕೆ ಮತ್ತೊಬ್ಬರು ಆಯ್ಕೆ ಆಗುತ್ತಾರೆ.
 

No Reviews