ಇಸ್ಲಾಮಾಬಾದ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಭಾರತ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಜೈಶ್-ಎ-ಮೊಹಮದ್ ಸಂಘಟನೆಯ ಅಜರ್ ಮಸೂದ್‌ನ ಸಹೋದರ, ಕಂದಹಾರ್ ವಿಮಾನ ಹೈಜಾಕ್‌ನ ಮಾಸ್ಟರ್‌ಮೈಂಡ್ ಅಬ್ದುಲ್ ರೌಫ್ ಅಜರ್ ಸಾವನ್ನಪ್ಪಿರುವ ಬಗ್ಗೆ ಭಾರತೀಯ ಗುಪ್ತಚರ ಇಲಾಖೆ ಧೃಢಪಡಿಸಿದೆ. ಬಹವಾಲ್ಪುರದಲ್ಲಿ ನಡೆಸಿದ ಏರ್‌ಸ್ಟ್ರೈಕ್ ವೇಳೆ ಜೈಶ್-ಎ-ಮೊಹಮದ್ ಸಂಘಟನೆಯ ಅಜರ್ ಮಸೂದ್‌ನ ಕುಟುಂಬದ 13 ಮಂದಿ ಸಾವನ್ನಪ್ಪಿದ್ದರು. ಈ ಪೈಕಿ ಅಜರ್ ಮಸೂದ್ ಸಹೋದರ ಅಬ್ದುಲ್ ರೌಫ್ ಕೂಡ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಅಬ್ದುಲ್ ರೌಫ್ ಅಜರ್ ಕಂದಹಾರ್ ವಿಮಾನ ಹೈಜಾಕ್ ಮಾತ್ರವಲ್ಲದೆ, ಉರಿ, ಪುಲ್ವಾಮಾ, ಪಠಾಣ್‌ಕೋಟ್ ಭಯೋತ್ಪಾದಕ ದಾಳಿ, 2001ರ ಸಂಸತ್ ದಾಳಿ, ಅಕ್ಷರಧಾಮ ದಾಳಿಯಲ್ಲೂ ಭಾಗಿಯಾಗಿದ್ದ. ಅಜರ್, ಲಷ್ಕರ್-ಎ-ತೈಬಾ ಭಯೋತ್ಪಾದಕ ಸಂಘಟನೆಯ ಕಮಾಂಡರ್ ಆಗಿದ್ದ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಪಾತ್ರ ವಹಿಸಿದ್ದಕ್ಕಾಗಿ ಭಾರತಕ್ಕೆ ಬೇಕಾದ ಮೋಸ್ಟ್ ವಾಂಟೆಡ್ ಉಗ್ರರ ಲಿಸ್ಟ್‌ನಲ್ಲಿ ಇವನೂ ಕೂಡ ಒಬ್ಬ.
ಕಂದಹಾರ್ ಹೈಜಾಕ್ ಮಾಸ್ಟರ್‌ಮೈಂಡ್ ಅಬ್ದುಲ್ ರೌಫ್ ಅಜರ್ ಸಾವು
2025-05-08 16:08:39- 56