News / Blog Details

  • Home
  • >
  • News / Blog Details

ಎರಡನೇ ಬಗ್ಗೆ ಮಾತನಾಡುವವರಿಗೆ ತಿರುಗೇಟು ಕೊಟ್ಟ ಮೇಘನಾ ರಾಜ್‌

  • 67
img ಎರಡನೇ ಬಗ್ಗೆ ಮಾತನಾಡುವವರಿಗೆ ತಿರುಗೇಟು ಕೊಟ್ಟ ಮೇಘನಾ ರಾಜ್‌
Font size:
Print

ನಟಿ ಮೇಘನಾ ರಾಜ್ ಪತಿಯೊಂದಿಗಿನ ಹಳೆಯ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್ ಮಾಡಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಪ್ರತಿ ಜನ್ಮಕ್ಕೂ ಚಿರು ಬೇಕು ಎಂದಿದ್ದಾರೆ. ಪತಿ ಚಿರಂಜೀವಿ ಜೊತೆ ಕಳೆದ ಸುಂದರ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡು ‘ಪ್ರತಿ ಜನ್ಮದಲ್ಲೂʼ ಎಂದು ನಟಿ ಕ್ಯಾಪ್ಷನ್ ನೀಡಿದ್ದಾರೆ. ಪ್ರತಿ ಜನ್ಮಕ್ಕೂ ಚಿರುನೇ ಬೇಕು ಎಂಬರ್ಥದಲ್ಲಿ ಮೇಘನಾ ಬರೆದುಕೊಂಡಿದ್ದಾರೆ. ಈ ಮೂಲಕ 2ನೇ ಮದುವೆ ಬಗ್ಗೆ ಮಾತನಾಡುವವರಿಗೆ ನಟಿ ತಿರುಗೇಟು ನೀಡಿದ್ದಾರೆ. ಇದೀಗ ಹಲವು ವರ್ಷಗಳ ನಂತರ ಮೇಘನಾ ರಾಜ್ ಮಲಯಾಳಂ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಕನ್ನಡ ಸಿನಿಮಾಗಳು ಅವರ ಕೈಯಲ್ಲಿವೆ. ಸದ್ಯದಲ್ಲೇ ಈ ಬಗ್ಗೆ ಅಪ್‌ಡೇಟ್ ಸಿಗಲಿದೆ. ಅಂದಹಾಗೆ, ಹಲವು ವರ್ಷಗಳಿಂದ ಪ್ರೀತಿಸಿ 2018ರಲ್ಲಿ ಚಿರಂಜೀವಿ ಸರ್ಜಾ ಜೊತೆ ಮದುವೆಯಾದರು. 2020ರಲ್ಲಿ ನಟ ಇಹಲೋಕ ತ್ಯಜಿಸಿದರು.
 

No Reviews