ನವದೆಹಲಿ :ರಾಜ್ಯದಲ್ಲಿ ಮೈಕ್ರೊ ಫೈನಾನ್ಸ್ ಅಟ್ಟಹಾಸ ಮಿತಿ ಮೀರಿ ಹೋಗಿದೆ. ಜೀವನ ಕಟ್ಟಿಕೊಳ್ಳೋಕೆ ಸಾಲ ಕೊಟ್ಟವರು ಈಗ ಜೀವವನ್ನೆ ಬಲಿ ಪಡೀತಿದ್ದಾರೆ.
ನರಕ ಅಕ್ಷರಶಃ ನರಕ.. ಕುಂತರೂ ಬಿಡುತ್ತಿಲ್ಲ.. ನಿಂತರೂ ಬಿಡುತ್ತಿಲ್ಲ.. ಪ್ರತಿನಿತ್ಯ ಚಿತ್ರಹಿಂಸೆ.. ಕೆಲಸಕ್ಕೆ ಹೋದರೆ ಅಲ್ಲೂ ಕಾಟ.. ಕೂಲಿಗೆ ಹೋದರೆ ಅಲ್ಲೂ ಬೆನ್ನು ಬೀಳ್ತಾರೆ.. ನೆಮ್ಮದಿಯಾಗಿ ಮನೆಯಲ್ಲಿ ಇದ್ದವರು ಊರು ಬಿಟ್ಟಿದ್ದಾರೆ..
ಕರ್ನಾಟಕದಲ್ಲಿ ಮೈಕ್ರೋಫೈನಾನ್ಸ್ ಸಂಸ್ಥೆಗಳಿಂದ ಜನರಿಗೆ ಕಿರುಕುಳ ನೀಡುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿವೆ. ಇದೀಗ ಕೊನೆಗೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು. ರಾಜ್ಯದಲ್ಲಿ ಮೈಕ್ರೋಫೈನಾನ್ಸ್ಗಳ ಕಿರುಕುಳಕ್ಕೆ ಕಡಿವಾಣ ಹಾಕುವುದಕ್ಕೆ ಸರ್ಕಾರ ಮುಂದಾಗಿದೆ. ಮೈಕ್ರೋಫೈನಾನ್ಸ್ ಸಂಸ್ಥೆಗಳು ಸಾಲದ ಹಣ ವಸೂಲಿ ಮಾಡುವ ಸಂದರ್ಭದಲ್ಲಿ ಸಾರ್ವಜನಿಕರ ಇರೋಣ ಅಂದರೆ ಅಲ್ಲೂ ಕಿರುಕುಳ.. ಕಿರುಕುಳ.. ಕಿರುಕುಳ.. ಕಡಿಮೆ ಬಡ್ಡಿ ಅಂತಾ ಜನರನ್ನ ನಂಬಿಸಿ ಕಾಸು ಕೈಗಿಟ್ಟ ಖಾಸಗಿ ಮೈಕ್ರೊ ಫೈನಾನ್ಸ್ ಕಂಪನಿಗಳು ಕೊಡುತ್ತಿರುವ ಕಾಟ ಅಷ್ಟಿಷ್ಟಲ್ಲ ಬಿಡಿ.. ನರಕಕ್ಕಿಂತ ಘನಘೋರ ಚಿತ್ರಹಿಂಸೆ ಕೊಡುತ್ತಿದ್ದಾರೆ.. ಕಿಲ್ಲರ್ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತ ಅಮಾಯಕರು ಸಾವಿನ ಹಾದಿ ಹಿಡಿದಿದ್ದಾರೆ.. ಈಗಾಗಲೇ ರಾಜ್ಯದಲ್ಲಿ ರಾಕ್ಷಸರ ಅಟ್ಟಹಾಸಕ್ಕೆ 20ಕ್ಕೂ ಹೆಚ್ಚು ಮಂದಿನ ಸಾವಿನ ಮನೆ ಸೇರಿದ್ದಾರೆ.. ಸಾಲದ ಕೈಗಿಟ್ಟವರು ಶೂಲಕ್ಕೆ ಏರಿಸುತ್ತಿದ್ದಾರೆ.. ಬಡ ಜನರನ್ನೇ ಟಾರ್ಗೆಟ್ ಮಾಡಿ ಕಷ್ಟಕ್ಕೆ ಅಂತಾ ಕಾಸು ಕೊಟ್ಟವರು ಈಗ ಪ್ರಾಣ ಬಲಿ ಪಡೀತಿದ್ದಾರೆ.. ಸ್ವಾಮಿ ಈಗ ಹಣ ಇಲ್ಲ ನಿಧಾನವಾಗಿ ಕಟ್ಟುತ್ತೇವೆ ಅಂದರೂ ಕೇಳುತ್ತಿಲ್ಲ.. ಕುತ್ತಿಗೆ ಮೇಲೆ ಕಾಲಿಟ್ಟ ಹಾಗೆ ಕಾಲಿಟ್ಟು ಹಣ ವಾಪಸ್ ಕೊಡುವಂತೆ ಪೀಡಿಸ್ತಿದ್ದಾರೆ..
ಹಾಗಾದ್ರೆ ಹಣ ಕೊಡುವ ಮೊದಲು ಕೇವಲ ಆಧಾರ್ ಕಾರ್ಡ್ ಇದ್ದರೆ ಸಾಕು ಅಂತಾರೆ.. ಆಮೇಲೆ ಹಣಾನು ಕೊಡುತ್ತಾರೆ.. ಆಗ ಬೇರೆನು ಪರಿಶೀಲನೆ ಮಾಡದೇ ಯಾವ ನಂಬಿಕೆ ಮೇಲಿಂದ ದುಡ್ಡು ಕೊಟ್ಟರೋ ಅದೇ ನಂಬಿಕೆಯಿಂದ ಈಗಲೂ ಇರಬೇಕಲ್ಲವಾ..? ಸ್ವಲ್ಪ ಸಮಯಾವಾಕಾಶ ಕೊಡಬೇಕಲ್ಲವಾ..? ಯಾಕಿಷ್ಟು ಕಿರುಕುಳ ಕೊಡುತ್ತಿದ್ದಾರೆ ಅನ್ನೋದು ಆ ದೇವರೇ ಬಲ್ಲ ಬಿಡಿ.. ಮಿಡಲ್ ಕ್ಲಾಸ್ ಫ್ಯಾಮಿಲಿ ಅಂದ್ಮೇಲೆ ಕಷ್ಟಗಳು ಕಾಮನ್.. ಹಾಗೆ ನಿತ್ಯ ತೊಂದರೆ, ಸಮಸ್ಯೆಗಳು ಕಾಮನ್.. ಕೆಲವರಂತೂ ಅಂದು ದುಡಿದರೆನೆ ಹೊಟ್ಟೆ ತುಂಬಿಸಕೊಳ್ಳೋಕೆ ಆಗೋದು.. ಇಂತಾ ಬೆಟ್ಟದಷ್ಟು ಕಷ್ಟಗಳು ಇರುವಾಗ ಲೋನ್, ಅಥವಾ ಕೈ ಸಾಲ.. ಇಲ್ಲಾ ಬ್ಯಾಂಕ್, ಫೈನಾನ್ಸ್ ಗಳಲ್ಲಿ ಸಾಲ ಪಡೀತಾರೆ.. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಖಾಸಗಿ ಫೈನಾನ್ಸ್ ಕಂಪನಿಗಳು ಬಡಪಾಯಿಗಳ ಬದುಕಲ್ಲಿ ಚದುರಂಗದಾಟ ಆಡುತ್ತಿದ್ದಾರೆ..
ಬೆಳಗಾದರೆ ಮನೆ ಮುಂದೆ ಬರುತ್ತಾರೆ.. ರಾತ್ರಿ 11 ಗಂಟೆ, 12 ಗಂಟೆ ಆದರೂ ಮನೆ ಮುಂದೆಯೇ ಜಾಂಡಾ ಹೂಡುತ್ತಾರೆ.. ಸಾಲದಕ್ಕೆ ಸ್ವಾಮಿ ಕಟ್ಟುತ್ತೇವೆ ಅಂದರೆ ಬಾಯಿಗೆ ಬಂದಾಗೆ ಬೈಯುತ್ತಾರೆ.. ಎಲ್ಲಾದರೂ ಹೋಗಿ ಸಾಯಿರಿ.. ನಮ್ಮ ದುಡ್ಡು ನಮಗೆ ಕೊಡಿ ಅಂತಾರೆ.. ಇದು ಯಾವ ನ್ಯಾಯ ಸ್ವಾಮಿ.. ಸಾಲ ಕೊಡುವಾಗ ಮಾತ್ರ ನಿಮಗೆ ಆದಾಗ ಸಾಲ ಕಟ್ಟಿ ಹಾಗೆ ಹೀಗೆ ಅಂತಾ ನಯವಾದ ಮಾತುಗಳನ್ನಾಡಿ, ಮಾತಲ್ಲೇ ಮೋಡಿ ಮಾಡುತ್ತೀರ.. ಅಮಾಯಕರು ಕೂಡ ಕಷ್ಟಕ್ಕೆ ಸಹಾಯ ಮಾಡುತ್ತಿದ್ದೀರ ಅಂತಾ ನಂಬಿ 50 ಸಾವಿರಾನೋ 1 ಲಕ್ಷನೋ ಸಾಲ ಪಡೀತಾರೆ..
ಅಸಲಿ ಆಟ ಶುರು ಮಾಡುತ್ತೀರ.. ಒಂದು ದಿನ ಚಾಚೂ ತಪ್ಪದೆ ಮನೆ ಬಳಿ ಹೋಗಿ ಮಾನ ಮರ್ಯಾದೆ ಹರಾಜು ಹಾಕುತ್ತೀರ.. ಒಂದು ವೇಳೆ ದುಡ್ಡು ಕಟ್ಟೋಕೆ ಆಗಿಲ್ಲ ಅಂದರೆ ಮನೆವೋ, ಅಥವಾ ವಸ್ತುಗಳನ್ನೋ ಜಪ್ತಿ ಮಾಡುತ್ತೀರ.. ಇದರಿಂದ ನೊಂದ ಅದೆಷ್ಟೋ ಮಂದಿ ಊರು ಖಾಲಿ ಮಾಡಿದ್ದಾರೆ.. ಇನನು ಕೆಲವರು ಜೀವನದ ಮೇಲೆ ಆಸೆ ಕಳೆದುಕೊಂಡು ಜೀವನೆ ಬಿಟ್ಟಿದ್ದಾರೆ.
ಹೌದು ರಾಜ್ಯದಲ್ಲಿ ಎದ್ದಿರೋ ಕಿಲ್ಲರ್ ಫೈನಾನ್ಸ್ ಕಿಚ್ಚು ಕಾಡ್ಗಿಚ್ಚಿನಂತೆ ಗಲ್ಲಿಗಲ್ಲಿಯಲ್ಲೂ ಆವರಿಸಿದೆ.. ಊರು, ಕೇರಿ ಯಾವುದನ್ನೂ ಬಿಡುತ್ತಿಲ್ಲ.. ಅವರು ಆಡಿದ್ದೇ ಆಟ ಅಂತಾ ಅಟ್ಟಹಾಸ ಮೆರಿತಿದ್ದಾರೆ.. ಈಗಾಗಲೇ ಮೈಸೂರು, ಮಂಡ್ಯ, ಚಿಕ್ಕಬಳ್ಳಾಪುರ, ತುಮಕೂರು, ಕಲಬುರಗಿ, ಹಾವೇರಿ, ಹಾಸನ ಸೇರಿದಂತೆ ಸಾಕಷ್ಟು ಜಿಲ್ಲೆಗಳಲ್ಲಿ ಯಮ ಫೈನಾನ್ಸ್ ಸಾವಿನ ಕೇಕೆ ಹಾಕುತ್ತಿದೆ.. ಸಾಲ ಕಟ್ಟೋಕೆ ಆಗದೆ, ಸಿಬ್ಬಂದಿಯ ಕಿರುಕುಳ ತಾಳಲಾರದೆ ಆತ್ಮಹತ್ಯೆ ಹಾದಿ ಇಡಿದಿದ್ದಾರೆ.. ಅದೂ ಸಾಲದು ಅಂತಾ ಕೆಲವೊಂದು ಕಡೆ ಕುಟುಂಬಗಳು ಗಂಟುಮೂಟೆ ಕಟ್ಟಿಕೊಂಡು ಮನೆಗೆ ಬೀಗ ಜಡಿಮೇಲೆ ದೌರ್ಜನ್ಯ ಕೊಡುವ, ಕಿರುಕುಳ ನೀಡುವುದನ್ನು ನಿಷೇಧಿಸುವ "ಕರ್ನಾಟಕ ಮೈಕ್ರೋಫೈನಾನ್ಸ್ ಪ್ರಿವೆನ್ಷನ್ ಆಫ್ ಕೋಯೆರ್ಸಿವ್ ಆ್ಯಂಡ್ ಇನ್ಹ್ಯೂಮನ್ ಆ್ಯಕ್ಷನ್ 2025" ಮಸೂದೆ ಕುರಿತು ಕಾನೂನು ಸಚಿವ ಎಚ್.ಕೆ.ಪಾಟೀಲ್ ಹಾಗೂ ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಕಂದಾಯ ಮತ್ತು ಆರ್ಥಿಕ ಇಲಾಖೆಗಳ ಅಧಿಕಾರಿಗಳೊಂದಿಗೆ ಮಹತ್ವದ ಸಭೆಯನ್ನು ನಡೆಸಿದ್ದಾರೆ.
ಸರ್ಕಾರ ಆದಷ್ಟು ಬೇಗ ಸುಗ್ರೀವಾಜ್ಞೆಯನ್ನು ಜಾರಿಗೆ ತಂದರೆ, ಬಡವರಿಗೆ, ಕೂಲಿ ಕಾರ್ಮಿಕರಿಗೆ, ಸಣ್ಣ ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ಅಭಿಪ್ರಾಯ ಪಟ್ಟಿದ್ದಾರೆ. ಯಾವುದೇ ದಾಖಲೆಯಿಲ್ಲದೇ ಹಣವನ್ನು ನೀಡುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ಬಡ್ಡಿ, ಚಕ್ರಬಡ್ಡಿ, ಮೀಟರ್ ಬಡ್ಡಿ ಎಂದುಕೊಂಡು, ಜನರನ್ನು ಸುಲಿಗೆ ಮಾಡುತ್ತಿವೆ. ಸರಿಯಾದ ಸಮಯಕ್ಕೆ ದುಡ್ಡನ್ನು ಹಿಂದಿರುಗಿಸದೇ ಇದ್ದಲ್ಲಿ, ವಸೂಲಾತಿಗೆ ಗೂಂಡಾಗಳನ್ನು ಕಳುಹಿಸುತ್ತಿವೆ. ಕೃಷ್ಣ ಭೈರೇಗೌಡ ಮತ್ತು ಎಚ್.ಕೆ.ಪಾಟೀಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಕಾನೂನು ರೂಪಿಸಲು ನಿರ್ಧರಿಸಲಾಗಿದೆ.