ಬೆಂಗಳೂರು: ಮೆಟ್ರೊʼ ಟಿಕೆಟ್ ದರ ಹೆಚ್ಚಳ ಮಾಡಿದ ಬಳಿಕ ಮೆಟ್ರೊ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಮೆಟ್ರೊದಲ್ಲಿ 8 ಲಕ್ಷಕ್ಕು ಹೆಚ್ಚು ಜನರು ಪ್ರಯಣಿಸುತ್ತಿದ್ದರು ಆದರೆ ಇಂದು 7 ಲಕ್ಷಕ್ಕಿಂತ ಕೆಳಗೆ ಇಳಿದಿದೆ.
ಮೆಟ್ರೊದಲ್ಲಿ ಸರಾಸರಿ 8.50 ಲಕ್ಷ ಜನರು ಪ್ರಯಾಣಿಸುತಿದ್ದರು. ಟಿಕೆಟ್ ದರ ಏರಿಕೆ ಮಾಡಿದ ಮೊದಲ ಸೋಮುವಾರವೇ 8.28 ಲಕ್ಷಕ್ಕೆ ಇಳಿಕೆಯಾಗಿತ್ತು. ಅಲ್ಲಿಂದ ಪ್ರತಿದಿನ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುತ್ತಾ ಬಂದಿದೆ. ಶನಿವಾರ 6.90 ಲಕ್ಷಕ್ಕೆ ಇಳಿದಿದೆ.
ದರ ನಿಗದಿ ಸಮಿತಿಯು ಶೇಕಡ 45 ರಷ್ಟು ದರ ಹೆಚ್ಚಳ ಮಾಡಲು ಶಿಫಾರಸು ಮಾಡಿದೆ” ಎಂದು ಹೇಳುತ್ತಿದ್ದ ಬಿಎಂ ಆರ್ ಸಿಎಲ್ ಶೇ 70 ರಿಂದ ಶೇ 100 ರಷ್ಟು ಹೆಚ್ಚಳ ಮಾಡಿತ್ತು ಪ್ರಯಾಣಿಕರಿಂದ ತೀವ್ರ ಆಕ್ಷೇಪಗಳು ಬಂದ ಬಳಿಕ ಕೆಲವು ಸ್ಟೇಜ್‌ಗಳಿಗೆ ಟಿಕೆಟ್ ದರ 10 ರೂ ಇಳಿಕೆ ಮಾಡಲಾಯಿತು ಈಗಲೂ ಹಲವು ಮೆಟ್ರೋ ಸ್ಟೇಸನ್‌ಗಳಲ್ಲಿ ಟಿಕೆಟ್ ದರ ಹಾಗೆಯೇ ಮುಂದುವರಿದಿದೆ. ಇದರ ಪರಿಣಾಮ ಪ್ರಯಾಣಿಕರು ಮೆಟ್ರೊ ಬದಲು ಬಸ್ ಮತ್ತು ಖಾಸಗಿ ವಾಹನಗಳಲ್ಲಿ ಓಡಡಾವರ ಸಂಖ್ಯೆ ಹೆಚ್ಚಾಗಿದೆ.