News / Blog Details

  • Home
  • >
  • News / Blog Details

ನಮ್ಮ ಮೆಟ್ರೋ ನಿಲ್ದಾಣದಲ್ಲಿ ಲವರ್ಸ್‌ಗಳ ರೋಮ್ಯಾನ್ಸ್‌ : ಛೀ, ಥೂ ಎಂದ ಪಬ್ಲಿಕ್‌

  • 25
img ನಮ್ಮ ಮೆಟ್ರೋ ನಿಲ್ದಾಣದಲ್ಲಿ ಲವರ್ಸ್‌ಗಳ ರೋಮ್ಯಾನ್ಸ್‌ : ಛೀ, ಥೂ ಎಂದ ಪಬ್ಲಿಕ್‌
Font size:
Print

ಬೆಂಗಳೂರು ಮೆಟ್ರೋ ನಿಲ್ದಾದಲ್ಲಿ ಜೋಡಿಯ ರೋಮ್ಯಾನ್ಸ್ ವಿಡಿಯೋ ವೈರಲ್: ಛೀ, ಥೂ ಎಂದ ನೆಟ್ಟಿಗರು
ಬೆಂಗಳೂರು ಮೆಟ್ರೋ ನಿಲ್ದಾಣದಲ್ಲಿ ಜೋಡಿಯೊಂದು ಅಸಭ್ಯವಾಗಿ ವರ್ತಿಸಿದೆ ಎನ್ನಲಾಗಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸಾರ್ವಜನಿಕವಾಗಿ ರೊಮ್ಯಾನ್ಸ್ ಮಾಡುತ್ತಾ ಅಸಭ್ಯವಾಗಿ ವರ್ತಿಸಿದ್ದಕ್ಕೆ ಆಕ್ಷೇಪವೂ ವ್ಯಕ್ತವಾಗಿದೆ. ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿಯೂ ದೆಹಲಿ ಮೆಟ್ರೋ ಮಾದರಿ ಶುರುವಾಗುತ್ತಿದೆಯೇ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಬೆಂಗಳೂರು, ಏಪ್ರಿಲ್ 11: ಅಕ್ಕಪಕ್ಕ ಜನರಿದ್ದರೂ ಕ್ಯಾರೇ ಎನ್ನದೆ ಜೋಡಿಯೊಂದು ಅಸಭ್ಯವಾಗಿ ರೊಮ್ಯಾನ್ಸ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಬೆಂಗಳೂರಿನ ಮೆಜೆಸ್ಟಿಕ್ ನಮ್ಮ ಮೆಟ್ರೋ  ನಿಲ್ದಾಣದ ಪ್ಲಾಟ್​ಫಾರ್ಮ್​ 3 ರಲ್ಲಿ ನಡೆದ ಘಟನೆ ಇದು ಎನ್ನಲಾಗುತ್ತಿದೆ.  ಮಾದಾವರ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ‘ಕರ್ನಾಟಕ ಪೋರ್ಟ್​​ಫೋಲಿಯೋ’ ಎಂಬ ಎಕ್ಸ್​​ ಹ್ಯಾಂಡಲ್​​ನಲ್ಲಿ, ‘‘ಬೆಂಗಳೂರು ಮೆಟ್ರೋ ಕೂಡ ದೆಹಲಿ ಮೆಟ್ರೋ ಸಂಸ್ಕೃತಿಯತ್ತ ಸಾಗುತ್ತಿದೆಯೇ?’’ ಎಂದು ಪ್ರಶ್ನಿಸಿ ಪೋಸ್ಟ್ ಮಾಡಲಾಗಿರುವ ಈ ವಿಡಿಯೋಗೆ  ಈಗ ವ್ಯಾಪಕ ಆಕ್ಷೇಪ ವ್ಯಕ್ತವಾಗುತ್ತಿದೆ. ಜೋಡಿಯ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸರು ಅಥವಾ ಬಿಎಂಆರ್​ಸಿಎಲ್ ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.

https://twitter.com/karnatakaportf/status/1910385125482758651

No Reviews