ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ಬಿಡುಗಡೆ ದಿನಾಂಕವನ್ನು ಚಿತ್ರತಂಡ ತಿಳಿಸಿದೆ.. ರಾಜಕೀಯದಲ್ಲಿ ಪವನ್ ಕಲ್ಯಾಣ್ ಬ್ಯುಸಿಯಿದ್ದ ಹಿನ್ನೆಲೆ ಈ ಚಿತ್ರ ಅರ್ಧಕ್ಕೆ ನಿಂತಿತ್ತು. ಕೊನೆಗೂ ಬಿಡುವು ಮಾಡಿಕೊಂಡು ‘ಹರಿ ಹರ ವೀರ ಮಲ್ಲು’ ಚಿತ್ರವನ್ನು ನಟ ಮುಗಿಸಿಕೊಟ್ಟಿದ್ದಾರೆ. ಮೇ 9ರಂದು ಬಿಡುಗಡೆಯಾಗಬೇಕಿದ್ದ ಈ ಸಿನಿಮಾ ಜೂನ್ 12ರಂದು ರಿಲೀಸ್ ಆಗಲಿದೆ. ಇದನ್ನು ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ. ಪವನ್ ಕಲ್ಯಾಣ್, ಮರಳಿ ಚಿತ್ರೀಕರಣ ಮುಂದುವರೆಸುವುದಿಲ್ಲ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ ಹಾಗೋ-ಹೀಗೋ ಮಾಡಿ ಏನೇನೋ ಅಡ್ಜಸ್ಟಮೆಂಟ್ಗಳ ಬಳಿಕ ‘ಹರಿ ಹರ ವೀರ ಮಲ್ಲು’ ಸಿನಿಮಾದ ಚಿತ್ರೀಕರಣ ಮುಗಿಸಲಾಗಿದೆ. ಈ ಹಿಂದೆ ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿತ್ತು. ಇದಕ್ಕೆ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಇದೀಗ ಬಿಡುಗಡೆ ಘೋಷಣೆ ಮಾಡಿ ಗುಡ್ ನ್ಯೂಸ್ ಕೊಟ್ಟಿರೋದು ನಟನ ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. ಈ ಸಿನಿಮಾದಲ್ಲಿ ಪವನ್ ಜೊತೆ ನಿಧಿ ಅಗರ್ವಾಲ್, ಬಾಬಿ ಡಿಯೋಲ್ ಸೇರಿದಂತೆ ಅನೇಕರು ನಟಿಸಿದ್ದಾರೆ.
ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ಬಿಡುಗಡೆಗೆ ಸಜ್ಜು
2025-05-16 18:04:42- 66