ವಿಜಯಪುರ:ಮೈಕ್ರೋಫೈನಾಸ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬೆಳ್ಳಂಬೆಳಿಗ್ಗೆ ಮೈಕ್ರೋ ಫೈನಾನ್ಸ್ ಅಕ್ರಮ ಬಡ್ಡಿ ದಂಧೆಕೋರರ ಮನೆ ಮೇಲೆ ವಿಜಯಪುರ ಪೊಲೀಸರು ದಾಳಿ ನಡೆಸಿದ್ದಾರೆ.
ಕಳೆದ ಕೆಲವು ವಾರಗಳಿಂದ ವಿಜಯಪುರದಲ್ಲಿ ಬಡ್ಡಿ ಮೀಟರ್ ಬಡ್ಡಿ ದಂಧೆಕೋರರ ಕಿರುಕುಳ ಹೆಚ್ಚಾಗಿದೆ. ಹೀಗಾಗಿ ಎಸ್ಪಿ ಲಕ್ಷಣ ನಿಂಬರಗಿ ಆದೇಶದ ಮೇರೆಗೆ ಬೆಳ್ಳಿಗೆ ಮನೆಗಳ ಮೇಲೆ ದಾಳಿ ನಡೆಸಿ ಶಾಕ್ ನೀಡಿದ್ದಾರೆ.
ಜಿಲ್ಲೆಯ ಹಲವಡೆ ಪೊಲೀಸರು ದಾಳಿ ನಡೆಸಿದ್ದು,ದಾಳಿ ಮಾಡಿ ಅಕ್ರಮ ಹಣ,ದಾಖಲಾತಿಗಳ ಪರಿಶೀಲನೆ ನಡೆಸಿದ್ದಾರೆ.ಅಕ್ರಮ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಬಡ ಜನರು ಬೇಸತ್ತು ಹೋಗಿದ್ದು, ಇದಕ್ಕೆ ಬ್ರೇಕ್ ಹಾಹುವ ನಟ್ಟಿನಲ್ಲಿ ದಾಳಿ ನಡೆಸಿದ್ದೇವೆ ಎಂದು ಎಸ್ಪಿ ತಿಳಿಸಿದ್ದಾರೆ.