ಪ್ರಸ್ತುತ ಬಾಲಿವುಡ್, ಟಾಲಿವುಡ್,ಕೊಲಿವುಡ್ನಲ್ಲಿ ಹೆಚ್ಚು ಕೇಳಿಸುತ್ತಿರುವ ಹೇಸರು ರಶ್ಮೀಕ ಮಂದನ. ಯಶಸ್ಸಿನ ಕಡೆ ಸಾಗುತ್ತಿರುವ ಈ ಸುಂದರಿ ಒಂದು ಕ್ಷಣ ಕೂಡ ಬಿಡುವಿಲ್ಲದೆ, ಸರಣಿ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ.. ಬಾಲಿವುಡ್ನಲ್ಲಿ ಕ್ರೇಜಿ ಸ್ಟಾರ್ ಆಗಿರುವ ರಶ್ಮೀಕಾ, ಆಯುಷ್ಮಾನ್ ಖುರಾನಾ ಜೊತೆ 'ಥಾಮಾ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇದು ಹಾರರ್ ಸಿನಿಮಾ ಆಗಿರುವುದರಿಂದ ಕಳೆದ ಕೆಲವು ದಿನಗಳಿಂದ ರಾತ್ರಿ ವೇಳೆ ಚಿತ್ರೀಕರಣ ನಡೆಯುತ್ತಿದೆ.. ಇನ್ನು ಈ ಸಿನಿಮಾ ವಿಷಯ ಹೀಗಿದ್ದರೇ, ರೌಡಿ ಹೀರೋ ವಿಜಯ್ ರಶ್ಮೀಕಾ ಇಬ್ಬರು ಡೇಟಿಂಗ್ ಮಾಡುತ್ತಿರುವ ಸುದ್ದಿ ಹಲವು ದಿನಗಳಿಂದ ನಾವು ಕೇಳುತ್ತಿದ್ದೇವೆ.. ಹಲವು ಬಾರಿ, ಇವರಿಬ್ಬರೂ ನಾವು ಕೇವಲ ಸ್ನೇಹಿತರು ಎಂದು ಕೂಡ ಹೇಳಿದ್ದಾರೆ. ಅದ್ರೆ ಯಾವ ವೆಕೆಷನ್ಗಳಿಗೆ ಹೊದ್ರೂ ಇಬ್ಬರು ಒಟ್ಟಿಗೆ ಹೋಗುತ್ತಾರೆ.. ಯಾರಿಗೂ ಗೊತ್ತಾಗದ ರೀತಿಯಲ್ಲಿ ಬೇರೆ ಬೇರೆ ಫೋಟೋಗಳನ್ನ ಹಂಚಿಕೊಳ್ಳುತ್ತಾರೆ.. ಸದ್ಯ ರಶ್ಮೀಕಾ ಇತ್ತಿಚಿಗೆ ತಮ್ಮ ರಿಲೇಷನ್ ಶೀಫ್ ಬಗ್ಗೆ ಒಂದು ಫೋಸ್ಟ್ ಹಂಚಿಕೊಂಡಿದ್ದಾರೆ..
ರಶ್ಮೀಕಾ ಸಿನಿಮಾ ಶೋಟಿಂಗ್ಗಳಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಯ್ಯಾಕ್ಟೀವ್ ಆಗಿರುತ್ತಾರೆ.. ಅವರಿಗೆ ಸಂಬಂಧಿಸಿದ ಪ್ರತಿಯೊಂದು ಅಪ್ಡೇಟ್ಗಳನ್ನು ತಮ್ಮ ಅಭಿಮಾನಿಗಳ ಜೋತೆ ಹಂಚಿಕೊಳ್ಳುತ್ತಾರೆ.. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ರಿಲೆಶನ್ ಸ್ಟ್ರಾಂಗ್ ಆಗಿ ಇರಬೇಕು ಅಂದ್ರೆ, ಯಾವ ನಿಯಮ ಪಾಲಿಸಬೇಕು ನಿಮಗೆ ಗೊತ್ತಾ ಅಂತಾ ಅಭಿಮಾನಿಗಳಿಗೆ ಪ್ರಶ್ನೆ ಕೇಳಿದ್ದು, ನಾವು ಯಾವುದೇ ಸಂದರ್ಭದಲ್ಲೂ ಒಬ್ಬಂಟಿಯಾಗಿ ಇರುವ ದಿನ ಬರದಂತೆ ನೋಡಿಕೊಳ್ಳಬೇಕು.. ಕಷ್ಟ ಮತ್ತು ಸಂತೋಷದ ಸಮಯದಲ್ಲಿ ಒಬ್ಬರಿಗೊಬ್ಬರು ಜೊತೆಗಿರಬೇಕು.. ಯಾವುದೇ ಸಂದರ್ಭದಲ್ಲೂ ಇಬ್ಬರು ಕೈ ಬಿಡಬಾರದು ಎನ್ನುವ ನಿಯಮವನ್ನು ಪಾಲಿಸಿದ್ರೆ ಸಾಕು ಅಂತಾ ಸೊಶೀಯಲ್ ಮೀಡಿಯಾದಲ್ಲಿ ಬಂದಿರುವಂತಹ ಒಂದು ಫೋಸ್ಟ್ನ್ನು ತಮ್ಮ ಇನ್ಸ್ಟಾ ಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.. ಅಷ್ಟೇ ಅಲ್ಲದೇ ಈ ನಿಯಮವನ್ನು ನಾನು ಒಪ್ಪುತ್ತೇನೆ ಅಂತಾ ರಶ್ಮೀಕಾ ಬರೆದುಕೊಂಡಿದ್ದಾರೆ.. ಇದನ್ನು ಗಮನಿಸಿದರೇ ಅವರಿಗೆ ರಿಲೇಷನ್ ಶಿಪ್ಲ್ಲಿ ಹೇಗಿರಬೇಕು ಎನ್ನುವ ಕ್ಲಾರಿಟಿ ಇದೇ ಅಂತಾ ಕ್ಲಿಯಾರ್ ಆಗಿ ಗೊತ್ತಾಗುತ್ತೆ..