ಬೆಂಗಳೂರು: ಆರ್‌ಸಿಬಿ ಅನ್‌ಬಾಕ್ಸ್ ಅಂದ್ರೆ ಅಭಿಮಾನಿಗಳಿಗೆಲ್ಲಾ ಹಬ್ಬ. ಈ ವರ್ಷ 2025ರ ಐಪಿಎಲ್‌ಗಾಗಿ ಆರ್‌ಸಿಬಿ ಹೊಸ ಜೆರ್ಸಿಯನ್ನೂ ಇದೇ ಕಾರ್ಯಕ್ರಮದಲ್ಲಿ ಅನಾವರಣ ಮಾಡಲಿದ್ದಾರೆ.
ಆರ್‌ಸಿಬಿ ವೆಬ್‌ಸೈಟ್ ಅಥವಾ ಆ್ಯಪ್‌ನಲ್ಲಿ 99 ರೂಪಾಯಿ ಕೊಟ್ಟು ನೋಂದಣಿ ಮಾಡಿಕೊಂಡ್ರೆ ಈ ಕಾರ್ಯಕ್ರಮವನ್ನ ನೇರಪ್ರಸಾರದಲ್ಲಿ ವೀಕ್ಷಿಸಬಹುದು. ಈ ಸಲದ ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾದ ಫೇಮಸ್ ಡಿಜೆ ಟಿಮ್ಮಿ ಟ್ರಂಪೆಟ್ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಜೊತೆಗೆ ಕನ್ನಡದ ಹೆಮ್ಮೆಯ ಗಾಯಕರಾದ ಸಂಜಿತ್ ಹೆಗ್ಡೆ, ಐಶ್ವರ್ಯ ರಂಗರಾಜನ್, ರ‍್ಯಾಪರ್ ಆಲ್ ಓಕೆ, ಸವಾರಿ ಬ್ಯಾಂಡ್ ಮತ್ತು ಬೆಸ್ಟ್ ಕೆಪ್ಟ್ ಸೀಕ್ರೆಟ್ ತಂಡದವರು ಕೂಡ ಸಂಗೀತದ ಮೋಡಿ ಮಾಡಲಿದ್ದಾರೆ. ಹೊಸ ತಂಡ, ಹೊಸ ಜೆರ್ಸಿ, ಹೊಸ ಉತ್ಸಾಹದ ಜೊತೆಗೆ ಈ ಸಂಗೀತ ಕಾರ್ಯಕ್ರಮ ಆರ್‌ಸಿಬಿ ಅಭಿಮಾನಿಗಳಿಗೆ ಮರೆಯಲಾಗದ ಅನುಭವ ನೀಡೋದು ಗ್ಯಾರಂಟಿ.
2025ರ ಐಪಿಎಲ್‌ಗಾಗಿ ಆರ್‌ಸಿಬಿ ಹೊಸ ಜೆರ್ಸಿ ಅನಾವರಣ.
2025-03-17 15:01:50- 39