ಬೆಂಗಳೂರು : ಕಳೆದ ಕೆಲವು ತಿಂಗಳಿನಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕನ್ನಡ ಚಲನಚಿತ್ರ ರಂಗದ ಖ್ಯಾತ ನೀರ್ದೆಶಕ ಎಸ್ ಉಮೇಶ್ ನಿಧನ ಹೊಂದಿದ್ದಾರೆ.
ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಉಮೇಶ್ ಚಿಕಿತ್ಸೆ ಫಲಕಾರಿಯಾಗದೆ ಫೆಬ್ರವರಿ (21) ನಿಧನ ಹೊಂದಿದ್ದಾರೆ. ಇವರ ಅಂತ್ಯಕ್ರಿಯೇ ಇಂದು ಬನಶಂಕರಿ ಚಿತಾಗಾರದಲ್ಲಿ ನೆರವೇರಲಿದೆ ಎಂದು ಕುಂಟುಬಸ್ಥರು ತಿಳಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ನಿರ್ದೇಶಕ ಏನಿಸಿಕೊಂಡಿದ್ದ ಉಮೇಶ್ ಅವರು,ಅವನೇ ನನ್ನ ಗಂಡ, ನನಗೂ ಹೆಂಡತಿ ಬೇಕು, ರಾಜ ಕೆಂಪು ರೊಜ” ಅವಳೆ ನನ್ನ ಹೆಂಡ್ತಿ, ಎಲ್ಲರಂಥಲ್ಲ ನನ್ನ ಗಂಡ ಅಂತಹ ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿ ಸೈ ಏನಿಸಿಕೊಂಡಿದ್ದರು.