News / Blog Details

  • Home
  • >
  • News / Blog Details

ರೇಣುಕಾಸ್ವಾಮಿ ಕೊಲೆ ಪ್ರಕರಣ; ಕೋರ್ಟ್‌ನಿಂದ ಕೈ ಹಿಡಿದು ಬಂದ ದರ್ಶನ್‌, ಪವಿತ್ರಾ

  • 65
img ರೇಣುಕಾಸ್ವಾಮಿ ಕೊಲೆ ಪ್ರಕರಣ; ಕೋರ್ಟ್‌ನಿಂದ ಕೈ ಹಿಡಿದು ಬಂದ ದರ್ಶನ್‌, ಪವಿತ್ರಾ
Font size:
Print

ಬೆಂಗಳೂರು:  ರೇಣುಕಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯನ್ನ ನ್ಯಾಯಾಲಯ ಮುಂದೂಡಿದ್ದು, ಜುಲೈ 10ಕ್ಕೆ ಮುಂದಿನ ವಿಚಾರಣೆಯ ದಿನಾಂಕವನ್ನ ನಿಗಧಿಪಡಿಸಿ 57ನೇ ಸಿಸಿಹೆಚ್​ ನ್ಯಾಯಲಯ ಆದೇಶ ಹೊರಡಿಸಿದೆ. ಇನ್ನು ವಿಚಾರಣೆ ಮುಗಿಸಿ ಹೊರಗೆ ಬರುವಾಗ ಕೋರ್ಟ್‌ ಆವರಣದಲ್ಲಿ ಪವಿತ್ರಗೌಡ ಅವರು ದರ್ಶನ್ ಕೈ ಹಿಡಿದುಕೊಂಡು ಬಂದಿದ್ದಾರೆ. ಪವಿತ್ರಾ ಗೌಡ ಬಿಳಿ ಬಣ್ಣದ ಸೀರೆ ಧರಿಸಿದ್ದರೆ ದರ್ಶನ್‌ ಕಪ್ಪು ಬಣ್ಣ ಡ್ರೆಸ್‌ ಧರಿಸಿದ್ದರು. ಸ್ನೇಹಿತ ಧನ್ವೀರ್ ಜೊತೆ ದರ್ಶನ್ ನ್ಯಾಯಾಲಯಕ್ಕೆ ಆಗಮಿಸಿದರು. ವಿಚಾರಣೆ ಆರಂಭವಾಗುತ್ತಿದ್ದಾಗ ದರ್ಶನ್‌ ದೂರದಲ್ಲಿ ನಿಂತಿದ್ದರು. ಹೆಸರನ್ನು ಕರೆದಾಗಲೂ ದರ್ಶನ್ ದೂರದಲ್ಲೇ ಇದ್ದರು. ಈ ವೇಳೆ ಜಡ್ಜ್‌ ಆರೋಪಿ ಸಂಖ್ಯೆಗೆ ಅನುಗುಣವಾಗಿ ನಿಲ್ಲುವಂತೆ ಸೂಚಿಸಿ ಪವಿತ್ರಾ ಗೌಡ ಬಳಿ ನಿಲ್ಲಲು ಹೇಳಿದರು. ಜಡ್ಜ್‌ ಸೂಚನೆಯ ನಂತರ ದರ್ಶನ್‌ ಪವಿತ್ರಾ ಗೌಡ ಬಳಿ ಬಂದು ನಿಂತುಕೊಂಡರು.
ಇಂದಿನ ವಿಚಾರಣೆಗೆ ಎ3 ಪವನ್ ಗೈರಾಗಿದ್ದರೆ ಎ11 ನಾಗರಾಜು ಕೇಸ್ ಮೇಲೆ ಹೊಸಪೇಟೆಗೆ ತೆರಳಲು ಅನುಮತಿ ನೀಡಿತು. ಆರೋಪಿಗಳ ವಿಚಾರಣೆಗೆ ಹಾಜರಾಗಲು ಹೆಚ್ಚಿನ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆಯನ್ನು ಜುಲೈ 10 ಕ್ಕೆ ಮುಂದೂಡಿಕೆ ಮಾಡಲಾಯಿತು. ಕೋರ್ಟ್‌ ಪವಿತ್ರಾ ಗೌಡಗೆ 15 ದಿನ ಹೊರರಾಜ್ಯಕ್ಕೆ ತೆರಳಲು ಅವಕಾಶ ನೀಡಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಜಾಮೀನು ಪಡೆದರೂ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂಬ ಷರತ್ತು ವಿಧಿಸಿದ ಹಿನ್ನೆಲೆಯಲ್ಲಿ ಇಂದು ಆರೋಪಿಗಳು ಕೋರ್ಟ್​ಗೆ ಹಾಜರಾಗಿದ್ದರು.
 

No Reviews