News / Blog Details

  • Home
  • >
  • News / Blog Details

40 ಅಲ್ಲ,400 ಜನರಿಗೆ ಹನಿಟ್ರ್ಯಾಪ್ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳೆ ಶಾಕಿಂಗ್ ಹೇಳಿಕೆ !

  • 74
img 40 ಅಲ್ಲ,400 ಜನರಿಗೆ ಹನಿಟ್ರ್ಯಾಪ್ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳೆ ಶಾಕಿಂಗ್ ಹೇಳಿಕೆ !
Font size:
Print

ರಾಜ್ಯದಲ್ಲಿ ಕೇವಲ 40 ಜನ ಪ್ರತಿನಿಧಿಗಳಲ್ಲ.ಕನಿಷ್ಠ 400 ಜನರನ್ನು ಹನಿ ಟ್ರ್ಯಾಪ್‌ ಬಲಿ ಮಾಡಲಾಗಿದೆ ಎಂದು ಸತೀಶ್ ಜಾರಕಿಹೊಳಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ .

ರಾಜ್ಯದಲ್ಲಿ ಮಾತ್ರವಲ್ಲ, ದೆಹಲಿಯ ಘಟಾನುಘಟಿ ನಾಯಕರಿಗೆ ಮತ್ತು ಅಧಿಕಾರಿಗಳಿಗೆ ಹನಿಟ್ರ್ಯಾಪ್ ಮಾಡಲಾಗಿದೆ ಎಂದು ಹೇಳಿದ್ದಾರೆ.ಸರ್ಕಾರ ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರವನ್ನು ಕಂಡು ಕೊಳ್ಳಬೇಕು ಎಂದು ತಿಳಿಸಿದ್ದಾರೆ.ಎಲ್ಲಾ ಪಕ್ಷಗಳ ನಾಯಕರನ್ನು ಇದರಲ್ಲಿ ಸಿಲುಕಿಸಲಾಗಿದೆ. ಹನಿಟ್ರ್ಯಾಪ್ ಮಾಡುವ ಪ್ರಯತ್ನಗಳ ವಿರುದ್ಧ ದೂರು ದಾಖಲಿಸುವಂತೆ ಸಚಿವ ರಾಜಣ್ಣ ಅವರಿಗೆ ನಾನೇ ಹೇಳಿದ್ದೆ ಎಂದು ತಿಳಿಸಿದ್ದಾರೆ.ಹನಿ ಟ್ರ್ಯಾಕ್ ಮಾಡಿ ಮುಖ್ಯಮಂತ್ರಿಗಳಿಗೆ ಬೆದರಿಕೆ ಒಡ್ಡುವ ನಿದರ್ಶನಗಳು ಈ ಹಿಂದೆಯೂ ನಡೆದಿದೆ ಎಂದು ಅವರು ಹೇಳಿದರು. ತಮ್ಮ ಕೆಲಸ ಸಾಧಿಸಲು ಇಂತಹ ಹನಿಟ್ರ್ಯಾಕ್ ಮಾಡಿ ಅಧಿಕಾರಿಗಳನ್ನು ಅವರು blackmail ಮಾಡುತ್ತಾರೆ ಎಂದು ಅವರು ಹೇಳುತ್ತಾರೆ. 20 ವರ್ಷಗಳಿಂದಲೂ ಹನಿಟ್ರ್ಯಾಪ್ ಆಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇದಕ್ಕೆ ಅಂತ್ಯ ಹಡಬೇಕು. ದೆಹಲಿ ನಾಯಕರು ಪಾಪ ಅಮಾಯಕರು, ಅವರೂ ಹನಿಟ್ರ್ಯಾಪ್ ಗೆ ಬಲೆಗೆ ಬಿದ್ದಿದ್ದಾರೆ. ಎಲ್ಲಾ ಪಕ್ಷದ ನಾಯಕರನ್ನು ಹನಿಟ್ರ್ಯಾಪ್ ಮಾಡಲಾಗಿದೆ.ಮೀನಿಗೆ ಬಲೆ ಬೀಸುವಂತೆ  ಬೀಸಿ ಹನಿಟ್ರ್ಯಾಪ್  ಮಾಡಿ ಅವರನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ಯತ್ನದಲ್ಲಿ ಇದ್ದಾರೆ  ಎಂದು ಆರೋಪ ಮಾಡಿದ್ದಾರೆ.

ಮಾಜಿ ಸಚಿವ ಮತ್ತು ಶಾಸಕ ಆರ್‌ವಿ ದೇಶಪಾಂಡೆ ಹನಿಟ್ರ್ಯಾಪ್‌ಗೆ ಬಲಿಯಾದವರನ್ನು ಮೂರ್ಖರು ಎಂದು ಹೇಳಿದ್ದಾರೆ. ಹನಿಟ್ರ್ಯಾಪ್‌ನಲ್ಲಿ ಭಾಗಿಯಾಗಿರುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ರಾಜಕೀಯದಲ್ಲಿರುವವರು ಪ್ರತಿ ಹೆಜ್ಜೆಯಲ್ಲೂ ಜಾಗರೂಕರಾಗಿರಬೇಕು. ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಒಮ್ಮೆ ಹತ್ಯೆಯಾದರೆ, ಆ ಸ್ಥಾನಮಾನವನ್ನು ಮರಳಿ ಪಡೆಯುವುದು ಕಷ್ಟ ಎಂದು ಅವರು ಹೇಳಿದರು.c

No Reviews