News / Blog Details

  • Home
  • >
  • News / Blog Details

 ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶಮಂತ್ ಬ್ರೋ ಗೌಡ

  • 89
img  ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶಮಂತ್ ಬ್ರೋ ಗೌಡ
Font size:
Print

ಲಕ್ಷ್ಮಿ ಬಾರಮ್ಮ, ಕನ್ನಡ ಬಿಗ್​ಬಾಸ್ ಸೀಸನ್​ 8ರ ಸ್ಪರ್ಧಿ, ನಟ ಶಮಂತ್ ಬ್ರೋ ಗೌಡ ಅವರು ಇಂದು ಹಸೆಮಣೆ ಏರಿದ್ದಾರೆ. ಬಹುಕಾಲದ ಗೆಳತಿ ಮೇಘನಾ ಜೊತೆ ಅದ್ಧೂರಿಯಾಗಿ ಮದುವೆಯಾಗಿದ್ದಾರೆ.  ಕುಟುಂಬಸ್ಥರ ಒಪ್ಪಿಗೆ ಮೇರೆಗೆ ತಾವು ಪ್ರೀತಿಸಿದ್ದ ಹುಡುಗಿ ಮೇಘನಾ ಜೊತೆಗೆ ಕಿರುತೆರೆ ನಟ ಶಮಂತ್​ ಬ್ರೋ ಗೌಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿನ್ನೆ ಅದ್ಧೂರಿಯಾಗಿ ರಿಸೆಪ್ಶನ್​ ಮಾಡಿಕೊಂಡಿದ್ದರು. ಶಮಂತ್​ ಬ್ರೋ ಗೌಡ ರಿಸೆಪ್ಶನ್​ಗೆ ಕನ್ನಡ ಕಿರುತೆರೆ ನಟ, ನಟಿಯರು, ಗಾಯಕರು, ಸ್ಯಾಂಡಲ್​ವುಡ್​ ಸ್ಟಾರ್​ಗಳು ಆಗಮಿಸಿ ನವ ಜೋಡಿ ಶುಭ ಹಾರೈಸಿದ್ದರು. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶಮಂತ್​ ಬ್ರೋ ಗೌಡ ಹಾಗೂ ಮೇಘನಾಗೆ ಸ್ಟಾರ್ ನಟ ನಟಿಯರು ಶುಭ ಹಾರೈಸಿದ್ದಾರೆ. ಶಮಂತ್ ಉತ್ತರ ಕರ್ನಾಟಕದ ಹುಡುಗ ಆಗಿದ್ದು, ಅವರ ಪೂರ್ತಿ ಹೆಸರು ಶಮಂತ್​ ಹಿರೇಮಠ. ಮೇಘನಾ ಕುಟುಂಬಸ್ಥರು ಮರಾಠಿಗರು. ಹೀಗಾಗಿ ಎರಡೂ ಶೈಲಿ ಕೊಂಚ ಸಾಮ್ಯತೆ ಇದ್ದು, ಸಂಪ್ರದಾಯಬದ್ಧವಾಗಿ ಈ ಜೋಡಿ ಅದ್ಧೂರಿಯಾಗಿ ಮದುವೆ ಮಾಡಿಕೊಂಡಿದ್ದಾರೆ.

No Reviews