ಚಿಕ್ಕಮಗಳೂರು : ಮನೆಗಳ ಮೇಲೆ ಅನ್ಯಕೋಮಿನ ಯುವಕರ ಗುಂಪದ್ದು ಕಲ್ಲು ತೂರಾಟ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ವಿಜಯಪುರ ಬಡಾವಣೆಯಲ್ಲಿ ನಡೆದಿದೆ. ಅನ್ಯಕೋಮಿನ ಯುವಕರು ಶುಕ್ರವಾರ ಉಪವಾಸದ ಹಬ್ಬ ಮುಗಿಸಿ ಹಿಂದೂಗಳ ಮನೆಗಳನ್ನು ಗುರಿಯಾಗಿಸಿ ಈ ಕೃತ್ಯ ನಡೆಸಿದ್ದಾರೆ.
ಮಹೇಶ್ ಎನ್ನುವರ ಮನೆ ಮೇಲೆ ತಡ ರಾತ್ರಿ ಕಲ್ಲು ತೂರಾಟ ನಡೆಸಿ , ಘೋಷಣೆ ಕೊಗಿ ಪರಾರಿಯಾಗಿದ್ದಾರೆ.ಕಲ್ಲು ತೂರಾಟದಿಂದ ಮನೆಯ ಕಿಟಕಿಯ ಗಾಜು ಪುಡಿ ಪುಡಿಯಾಗಿದೆ.
ಮನೆ ಮಾಲೀಕರು ಘಟನೆ ನಡೆದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ತಕ್ಷಣವೇ ಬಸವನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀನೆ ನಡೆಸಿ , ಪ್ರಕರಣ ದಖಾಲಾಯಿಸಿಕೊಂಡಿದ್ದಾರೆ.