News / Blog Details

  • Home
  • >
  • News / Blog Details

ಹಾಲಿನ ಬೆಲೆ ಏರಿಕೆ ಬೆನ್ನೆಲೆ ಕಾಫಿ ಟೀ ದರವು ಹೆಚ್ಚಳ ಜನಸಾಮಾನ್ಯರ ಜೇಬಿಗೆ ಕತ್ತರಿ !

  • 43
img ಹಾಲಿನ ಬೆಲೆ ಏರಿಕೆ ಬೆನ್ನೆಲೆ ಕಾಫಿ ಟೀ ದರವು ಹೆಚ್ಚಳ ಜನಸಾಮಾನ್ಯರ ಜೇಬಿಗೆ ಕತ್ತರಿ !
Font size:
Print

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಂಪುಟ ಸಭೆಯಲ್ಲಿ ನಂದಿನಿ ಹಾಲಿನ ಬೆಲೆ  ದಿಡೀರ್ ಆಗಿ 4 ರೂ ಹೆಚ್ಚಳ ಮಾಡಿದ ಬೆನ್ನಲ್ಲೇ ಹೊಟೇಲ್ ಮಾಲೀಕರ ಅಸೋಸಿಯೇಷನ್ ​ ಕಾಫಿ ಮತ್ತು ಟೀ ದರ ಏರಿಕೆ ಮಾಡಿದ್ದಾರೆ.

ಇತ್ತೀಚೆಗೆ ಹಾಲಿನ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ, ಬೆಂಗಳೂರು ಹೋಟೆಲ್ ಅಸೋಸಿಯೇಷನ್ ​​ಕಾಫಿ ಮತ್ತು ಟೀ ಬೆಲೆಯನ್ನು ಎರಡರಿಂದ ಮೂರು ರೂಪಾಯಿಗಳಷ್ಟು ಹೆಚ್ಚಿಸಲು ನಿರ್ಧರಿಸಿದ್ದಾರೆ  

ದರ ಹೆಚ್ಚಿಗೆ ಬಗ್ಗೆ ಸ್ಪಷ್ಟನೆ ನೀಡಿರುವ ರಾಜ್ಯ ಸರಕಾರ ನಂದಿನಿ ಹಾಲಿನ ಬೆಲೆ ಏರಿಕೆ ಮಾಡಿ ಆ ಹಣವನ್ನು ರೈತರಿಗೆ ನೀಡಲಾಗುವುದು ಎಂದು ತಿಳಿಸಿತ್ತು. ಆದರೆ ನಿರಂತರ ಹಾಲಿನ ದರದ ಜೊತೆ ಚಹಾ ಮತ್ತು ಕಾಫಿ ಬೆಲೆ ಹೆಚ್ಚಿಗೆಯಿಂದಾಗಿ ರಾಜ್ಯದ ಜನರಿಗೆ ದೊಡ್ಡ ಹೊಡೆತ ಕೊಟ್ಟಿದ್ದು ಜನಸಾಮಾನ್ಯರ ಜೇಬಿಗೆ ಕತ್ತರಿ ಬಿದ್ದಿದೆ.

No Reviews