అగ్ని ಅವಘಡ ಸಂಭವಿಸಿದ ಘಟನೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಿನ್ನೆ ಸಂಜೆ ಸಂಭವಿಸಿದ್ದು ಕಟ್ಟಡದಲ್ಲಿರುವ ಜನ ಪಾರಾಗುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಈ ವೇಳೆ ಕಟ್ಟಡದಲ್ಲಿ ಹಲವು ಮಂದಿ ಸಿಲುಕಿಕೊಂಡಿದ್ದಾರೆ ಈ ನಡುವೆ ನಾಲ್ಕನೇ ಮಹಡಿಯಲ್ಲಿದ್ದ ಮಹಿಳೆಯೊಬ್ಬರು ಬಾಲ್ಕನಿ ಬಳಿ ನಿಂತು ತನ್ನ ಇಬ್ಬರು ಮಕ್ಕಳನ್ನು ರಕ್ಷಣೆ ಮಾಡುವಂತೆ ಕೇಳಿಕೊಂಡಿದ್ದಾರೆ ಇದನ್ನು ಗಮನಿಸಿದ ಕೆಳಗಿನ ಮಹಡಿಯಲ್ಲಿದ್ದ ವ್ಯಕ್ತಿಗಳು ಸಹಾಯಕ್ಕೆ ಮುಂದಾಗಿದ್ದಾರೆ. ಅದರಂತೆ ಮಹಿಳೆ ಮೊದಲು ಓರ್ವ ಮಗನನ್ನು ಕಿಟಕಿಯ ಮೂಲಕ ಕೆಳಗೆ ಓರ್ವ ಮಗನನ್ನು ಕಿಟಕಿಯ ಮೂಲಕ ಕೆಳಗೆ ನೀಡಿದ್ದಾಳೆ ಕೆಳಗಿನ ಮಹಡಿಯಲ್ಲಿ ಇಬ್ಬರು ವ್ಯಕ್ತಿಗಳು ಕಿಟಕಿಯಲ್ಲಿ ನಿಂತು ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಇಬ್ಬರು ಮಕ್ಕಳನ್ನು ರಕ್ಷಣೆ ಮಾಡಿದ ಬಳಿಕ ಮಹಿಳೆ ತಾನೂ ಕಿಟಕಿಯಿಂದ ನೇತಾಡಿ ಕೆಳಗಿದ್ದ ವ್ಯಕ್ತಿಗಳು ಆಕೆಯನ್ನು ಹಿಡಿದು ರಕ್ಷಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಬೆಂಕಿಯನ್ನು ಲೆಕ್ಕಿಸದೇ ಮಕ್ಕಳನ್ನ ರಕ್ಷಿಸಿದ ತಾಯಿ..!
2025-04-12 11:25:16- 8