ಅಜಿತ್ ತೀರ್ಥಹಳ್ಳಿ ನಿರ್ದೇಶನ ಮಾಡಿರುವ ಅಪಾಯವಿದೆ ಎಚ್ಚರಿಕೆ ಚಿತ್ರ ಆರಂಭದಿಂದ ಇಲ್ಲಿಯವರೇಗು ಜನ ಸ್ಪಂದನೆ ಗಳಿಸುತ್ತ ಬಂದಿದೆ. ಫೆಬ್ರವರಿ 28 ರಂದು ಬಿಡುಗಡೆಗೆ ರೆಡಿಯಾಗಿರುವ ಚಿತ್ರದ ಟ್ರೈಲರ್‌ನ್ನು ಇಂದು ಬಿಡುಗಡೆ ಮಾಡಲಿದ್ದಾರೇ.
ವಿಭಿನ್ನ ಕಥೆಯುಳ್ಳ ಚಿತ್ರಎಂದು ಸುಳಿವು ಪ್ರೇಕ್ಷರಿಗೆ ಸಿಕ್ಕಿದ್ದು ಈಗ ಇದಕ್ಕೆ ಸಾಕ್ಷಿ ಎನ್ನುವಂತೆ ಅತ್ಯಂತ ವಿಶೇಷವಾಗಿ ಟ್ರೈಲರ್‌ನನ್ನು ಬಿಡುಗಡೆಮಾಡಲಾಗಿದೆ. ಈಟಿ ಮಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜನ ಸಮಾನ್ಯರಿಂದಲೇ ಟ್ರೈಲರ್‌ನನ್ನು ಬಿಡುಗಡೆ ಮಾಡಿಸಿ ಜನರ ಮೆಚ್ಚುಗೆಗೆ ಚಿತ್ರತಂಡ ಪಾತ್ರರಾಗಿದ್ದಾರೆ.
ಚಿತ್ರದ ಟ್ರೈಲರ್ ಬಿಡುಗದೆ ಬೇರೆಯೇ ರೀತಿಯಲ್ಲಿ ಇದ್ದು. ಗಣ್ಯ ವ್ಯಕ್ತಿಗಳಿಂದ, ಅಥಾವ ರಾಜಕಾರಣಿಗಳಿಂದ ಟ್ರೈಲರ್‌ನನ್ನು ಬಿಡುಗಡೆ ಮಾಡಲಾಗುತ್ತದೆ. ಆದರೆ ಅಜಿತ್ ತೀರ್ಥಹಳ್ಳಿ ಕ್ಯಾಬ್ ಡೈವರ್‌ನಿಂದ, ನಾನ ಕೆಲಸ ಮಾಡುವ ವ್ಯಕಿಗಳಿಂದ ಟ್ರೈಲರ್ ಬಿಡುಗಡೆ ಮಾಡಿರುವುಸದು ವಿಶೇಷವಾಗಿದೆ.
ಅಪಾಯವಿದೆ ಎಚ್ಚರಿಕೆ ಸಸ್ಪೆನ್ಸ್ ಹಾರರ್ ಥ್ರಿಲ್ಲರ್ ಜಾನರಿನ ಸಿನಿಮಾಗಿದ್ದು. ಮಲೆನಾಡಿನ ದಟ್ಟ ಕಾಡೊಳಗೆ ಘಟಿಸುವ ಮೈ ನವಿರೇಳಿಸುವ ಕಥನ ಇದರ ಜೀವಾಳವಾಗಿದೆ. ಅದರ ಒಟ್ಟಾರೆ ಸ್ವರೂಪ ಹೇಗಿದೆ ಅನ್ನೋದರ ಸುಳಿವೊಂದು ಈ ಟ್ರೈಲರ್ ಮೂಲಕ ದಾಟಿಕೊಂಡಿದೆ. ಎದೆ ಅದುರಿಸೋ ದೃಷ್ಯಗಳ ಮೂಲಕ ವಿಭಿನ್ನ ಕಥೆಯನ್ನು ಈ ಚಿತ್ರದಲ್ಲಿ ನೋಡಬಹುದು