ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಕ್ರೇನ್ ಶಾಂತಿ ಒಪ್ಪಂದದ ಬಗ್ಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜತೆ ಮಂಗಳವಾರ(ಮಾರ್ಚ್18)ದಂದು ಮಾತನಾಡಲಿದ್ದಾರೆ.
ಎನ್ನುವ ಮಾಹಿತಿ ಲಭ್ಯವಾಗಿದೆ.ಭಾನುವಾರ ಸಂಜೆ ಫ್ಲೋರಿಡಾದಿಂದ ವಾಷಿಂಗ್ಟನ್‌ಗೆ ಏರ್ ಫೋರ್ಸ್ ಒನ್‌ನಲ್ಲಿ ಹಾರಾಟ ನಡೆಸುವಾಗ ಅವರು ವರದಿಗಾರರಿಗೆ ಈ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.ಕಳೆದ ವಾರ ಡೊನಾಲ್ಡ್ ಟ್ರಂಪ್ ಹಾಗೂ ಉಕ್ರೇನ್ ಶಾಂತಿ ಒಪ್ಪಂದದ ಬಗ್ಗೆ ಪುಟಿನ್ ಜತೆ ನಾಳೆ ಟ್ರಂಪ್ ಮಾತುಕತೆ.ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನಡುವಿನ ಮಾತುಕತೆ ವಿಫಲವಾದಾಗ ನಿಜವಾಗಿಯೂ ಉಕ್ರೇನ್ ಯುದ್ಧ ಕೊನೆಗೊಳ್ಳಲು ಸಾಧ್ಯವೇ ಎನ್ನುವ ಅನುಮಾನ ಉದ್ಭವವಾಗಿತ್ತು.
ಕಳೆದ ವರ್ಷ ಆಗಸ್ಟ್‌ನಲ್ಲಿ ಉಕ್ರೇನ್‌ನ ಸೈನ್ಯವು ಗಡಿಯುದ್ದಕ್ಕೂ ದಾಳಿ ಮಾಡಿ ಅಂದಾಜು 1,300 ಚದರ ಕಿಲೋಮೀಟರ್ (500 ಚದರ ಮೈಲಿ) ಭೂಮಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಮೂಲಕ ರಷ್ಯಾವನ್ನು ಬೆರಗುಗೊಳಿಸಿತ್ತು. ಕುರ್ಸ್ಕ್ ಪ್ರದೇಶದಲ್ಲಿ ಉಕ್ರೇನ್ ಆಕ್ರಮಿಸಿಕೊಂಡಿದ್ದ ಅತಿದೊಡ್ಡ ಪಟ್ಟಣವಾದ ಸುಡ್ಜಾವನ್ನು ರಷ್ಯಾ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ ಎಂದು ಹೇಳಿಕೊಂಡಿದೆ. ಉಕ್ರೇನ್ ತನ್ನ ಪೂರ್ವ ಡೊನೆಟ್ಸ್ಕ್ ಪ್ರದೇಶದಲ್ಲಿ ಹೆಚ್ಚುತ್ತಿರುವ ಒತ್ತಡದಲ್ಲಿ ಹೋರಾಡುತ್ತಿದೆ, ಅಲ್ಲಿ ರಷ್ಯಾದ ಪಡೆಗಳು ಮುನ್ನಡೆಯುತ್ತಿವೆ.