ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ನೂರಕ್ಕೆ ನೂರರಷ್ಟು ರದ್ದುಗೊಳ್ಳುತ್ತದೆ ಬಿಜೆಪಿಯಲ್ಲಿ ಗಟ್ಟಿಯಾಗಿ ಉಳಿಯುತ್ತಾರೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭರವಸೆ ನೀಡಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ಭಾರತೀಯ ಜನತಾ ಪಾರ್ಟಿಯ ಮತ್ತು ಸಮುದಾಯದ ಪ್ರಬಲ ನಾಯಕರು. ಇಂದಿಗೂ ಅವರು ಯತ್ನಾಳ್ ನಾಯಕ. ಅದೇ ರೀತಿ, ಪಕ್ಷದ ನಿರ್ಣಯವನ್ನು ಪ್ರಶ್ನಿಸುವ ದೊಡ್ಡ ವ್ಯಕ್ತಿ ನಾನು ಅಲ್ಲ. ಅಲ್ಲದೆ, ಯತ್ನಾಳ್ ಅವರನ್ನು ಪಾರ್ಟಿಯಿಂದ ಹೊರಹಾಕಿರುವ ಬಗ್ಗೆ ನನಗೆ ಒಂದು ತಿಂಗಳ ಹಿಂದೆಯೇ ಗೊತ್ತಿತ್ತು. ಅವರು ಉಚ್ಚಾಟನೆಯನ್ನು ತಡೆಹಿಡಿಯುತ್ತಾರೆಂದು ಭಾವಿಸಿದ್ದೇ ಎಂದು ಹೇಳಿದ್ದಾರೆ.
ಕೇಂದ್ರದ ಶಿಸ್ತುಸಮಿತಿಗೆ ಯತ್ನಾಳ್ ಅವರಿಂದ ಪತ್ರ ಬರೆಸಿ, ಪುನರ್ ಪರಿಶೀಲನೆ ಮಾಡುವಂತೆ ಹೈಕಮಾಂಡ್ ಗೆ ಮನವಿ ಮಾಡಿಕೊಳ್ಳುತ್ತೇವೆ.ನಮ್ಮಿಂದಲೂ ತಪ್ಪು ಆಗಿರಬಹುದು.ನಮ್ಮಲ್ಲಿನ ನ್ಯೂನತೆಗಳನ್ನ ಸರಿಪಡಿಸಿಕೊಂಡು ಪಕ್ಷದಲ್ಲಿ ಮುಂದುವರಿಯುತ್ತೇವೆ,
ಈ ರೀತಿ ಹೈಕಮಾಂಡ್ ಯಾಕೆ ನಿರ್ಣಯ ತೆಗೆದುಕೊಂಡಿದೆ ಎಂಬ ಬಗ್ಗೆ ನಾಳೆ ಚರ್ಚಿಸಲು ಬೆಂಗಳೂರಿನಲ್ಲಿ ಸಭೆ ಸೇರುತ್ತೇವೆ. ಯತ್ನಾಳ್ ಕೂಡ ಬೆಂಗಳೂರಿಗೆ ಬರುತ್ತಾರೆ. ನಾವೆಲ್ಲರೂ ಸೇರಿ ಈ ಬಗ್ಗೆ ಚರ್ಚಿಸುತ್ತೇವೆ ಆದಷ್ಟು ಬೇಗನೇ ಉಚ್ಚಾಟನೆ ಆದೇಶ ಹಿಂಪಡೆಯುತ್ತಾರೆ ಎಂದು ನೂರಕ್ಕೆ ನೂರು ವಿಶ್ವಾಸವಿದೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.