ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನಿಲ್ಲಿಸಿದ್ದ ಇಂಡಿಗೋ ವಿಮಾನಕ್ಕೆ ಟಿಟಿ ಡಿಕ್ಕಿ ಹೊಡೆದಿದೆ. ಇಂಜಿನ್ ರಿಪೇರಿಯಿಂದಾಗಿ ವಿಮಾನ ಕೆಟ್ಟು ನಿಂತಿತ್ತು. ನಿಂತಿದ್ದ ವಿಮಾನಕ್ಕೆ ಶನಿವಾರ ಸಂಜೆ ಟಿಟಿ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಟಿಟಿ ವಾಹನದ ಮೇಲ್ಬಾಗ ನಜ್ಜುಗುಜ್ಜಾಗಿದೆ. ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಟಿಟಿ ವಾಹನದ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಕೂದಲಳತೆ ಅಂತರದಲ್ಲಿ ಏರ್ಪೋಟ್ ನಲ್ಲಿ ಭಾರೀ ಅನಾಹುತ ತಪ್ಪಿದೆ. ಇನ್ನು ಏರ್ರ್ಪೋಟ್ ಒಳಭಾಗದ ಆಲ್ಪಾ ಪಾರ್ಕಿಂಗ್ ಬೇ 71 ರಲ್ಲಿ ನಿಂತಿದ್ದ ಇಂಡಿಗೋ ವಿಮಾನ. ಕಳೆದ ಹಲವು ದಿನಗಳಿಂದ ಇಂಜಿನ ರಿಪೇರಿಯಿಂದ ಕೆಟ್ಟು ನಿಂತಿತ್ತು. ಚಾಲಕನ ಅಜಾಗರೂಕತೆಯಿಂದ ಫ್ಲೈಟ್ನ ಮುಂಭಾಗಕ್ಕೆ ಟಿಟಿ ವಾಹನ ಡಿಕ್ಕಿ ಹೊಡೆದಿದೆ. ಏರ್ಪೋಟ್ ಒಳ ಭಾಗದಲ್ಲಿ ವಿಮಾನಗಳಿಗೆ ಟಿಟಿಯಲ್ಲಿ ಸಿಬ್ಬಂದಿಯನ್ನ ಕರೆದುಕೊಂಡು ಹೋಗಿ ಬಿಡಲಾಗ್ತಿತ್ತು. ಸಿಬ್ಬಂದಿಯನ್ನ ಬಿಟ್ಟು ಬರ್ತಿದ್ದ ವೇಳೆ ಚಾಲಕನಿಗೆ ಕಂಟ್ರೋಲ್ ತಪ್ಪಿದ್ದು, ನಿಂತಿದ್ದ ವಿಮಾನಕ್ಕೆ ಡಿಕ್ಕಿ ಹೊಡೆದಿದ್ದಾನೆ. ನಾಗರೀಕ ವಿಮಾನಯಾನ ಇಲಾಖೆ ಅಧಿಕಾರಿಗಳು ಮತ್ತು ಏರ್ಪೋಟ್ ಸಿಬ್ಬಂದಿ ಘಟನೆ ಕುರಿತು ತನಿಖೆ ನಡೆಸಿದ್ದಾರೆ.
ಕೆಟ್ಟು ನಿಂತಿದ್ದ ವಿಮಾನಕ್ಕೆ ಡಿಕ್ಕಿ ಹೊಡೆದ ಟಿಟಿ ವಾಹನ
2025-04-20 11:54:55- 7