ಕನ್ನಡದ ಸ್ಟಾರ್ ನಟಿ ವೈಷ್ಣವಿ ಗೌಡ ಸದ್ಯ ವೈಯಕ್ತಿಕ ಜೀವನಕ್ಕೆ ಸಮಯ ಕೊಡಲು ಮುಂದಾಗಿದ್ದಾರೆ.
ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಸಖತ್ ಫೇಮಸ್ ಆಗಿದ್ದರು ನಟಿ ವೈಷ್ಣವಿ ಗೌಡ. ತಮ್ಮ ಕ್ಯೂಟ್ ನಟನೆ ಮೂಲಕವೇ ವೀಕ್ಷಕರ ಮನಸ್ಸಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡರು. ಈಗ ನಟಿ ವೈಷ್ಣವಿ ಗೌಡ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಸೀತಾ ರಾಮ ಸೀರಿಯಲ್ನಲ್ಲಿ ಸೀತಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ನಟಿ ವೈಷ್ಣವಿ ಗೌಡ ಅಭಿಮಾನಿಗಳಿಗೆ ಗುಡ್ನ್ಯೂಸ್ವೊಂದನ್ನು ಕೊಟ್ಟಿದ್ದಾರೆ. ಸಿಂಗಲ್ ಆಗಿದ್ದ ವೈಷ್ಣವಿ ಗೌಡ ಮಿಂಗಲ್ ಆಗೋದಕ್ಕೆ ಸಜ್ಜಾಗಿದ್ದಾರೆ. ನಿನ್ನೆ, ಏಪ್ರಿಲ್ 14ರಂದು ನಟಿ ವೈಷ್ಣವಿ ಗೌಡ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಟಿ ವೈಷ್ಣವಿ ಗೌಡ ಉದ್ಯಮಿ ಜೊತೆಗೆ ಮದುವೆಗೆ ರೆಡಿಯಾಗಿದ್ದಾರೆ. ಉದ್ಯಮಿ ಅಕಾಯ್ ಹಾಗೂ ವೈಷ್ಣವಿ ಗೌಡ ಗುರು ಹಿರಿಯರ ಸಮ್ಮುಖದಲ್ಲಿ ಒಬ್ಬರೊಬ್ಬರು ಉಂಗುರ ಬದಲಾಯಿಸಿಕೊಂಡಿದ್ದಾರೆ.
ನಟಿ ವೈಷ್ಣವಿ ಗೌಡ ನಿಶ್ಚಿತಾರ್ಥ ಸಮಾರಂಭಕ್ಕೆ ಸ್ಯಾಂಡಲ್ವುಡ್ ಸ್ಟಾರ್ ನಟಿ ಅಮೂಲ್ಯ ಗೌಡ ದಂಪತಿ ಭಾಗಿಯಾಗಿದ್ದರು. ಅಲ್ಲದೇ ನಿರೂಪಕಿ ಚೈತ್ರಾ ವಾಸುದೇವನ್, ಪೂಜಾ ಲೋಕೇಶ್, ಜ್ಯೋತಿ ಕಿರಣ್, ರೀತು ಸಿಂಗ್, ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಸಂಪ್ರದಾಯಿಕವಾಗಿ ಉದ್ಯಮಿ ಅಕಾಯ್ ಎನ್ನುವವರ ಜೊತೆ ನಟಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇನ್ನೂ, ನಟಿ ವೈಷ್ಣವಿ ಗೌಡ ಮದುವೆ ಯಾವಾಗ ಎಂದು ರಿವೀಲ್ ಮಾಡಿಲ್ಲ. ಮುಂದಿನ ದಿನಗಳಲ್ಲಿ ನಟಿ ಈ ಬಗ್ಗೆ ಮಾಹಿತಿ ಕೊಡಬಹುದು.
ಸಿಂಗಲ್ ಆಗಿದ್ದ ವೈಷ್ಣವಿ ಗೌಡ ಕೊನೆಗೂ ಮಿಂಗಲ್..!
2025-04-15 10:17:05- 13