News / Blog Details

  • Home
  • >
  • News / Blog Details

ವಿಜಯ್ ದೇವರಕೊಂಡ ನಟನೆಯ ಕಿಂಗ್​ಡಮ್ ಸಾಂಗ್ ಬಿಡುಗಡೆ

  • 63
img ವಿಜಯ್ ದೇವರಕೊಂಡ ನಟನೆಯ ಕಿಂಗ್​ಡಮ್ ಸಾಂಗ್ ಬಿಡುಗಡೆ
Font size:
Print

ವಿಜಯ್ ದೇವರಕೊಂಡ ನಟನೆಯ ಕಿಂಗ್‌ಡಮ್‌ ಚಿತ್ರದ ರೊಮ್ಯಾಂಟಿಕ್‌ ಸಾಂಗ್‌ವೊಂದು ರಿಲೀಸ್‌ ಆಗಿದ್ದು, ಈ ಹಾಡಿನಲ್ಲಿನ ವಿಜಯ್‌ ನಾಯಕಿ ಭಾಗ್ಯಶ್ರೀ ಲಿಪ್‌ಲಾಕ್‌ ಮಾಡಿದ್ದಾರೆ. ಅರ್ಜುನ್ ರೆಡ್ಡಿ ಚಿತ್ರದಲ್ಲಿ ವಿಜಯ್ ದೇವರಕೊಂಡ ಅವರು ಸಖತ್ ಮಾಸ್ ಆಗಿ ಕಾಣಿಸಿಕೊಂಡಿದ್ದರು. ಪ್ರೀತಿಗಾಗಿ ಸದಾ ಹಪಹಪಿಸುವ ಯುವಕನ ಪಾತ್ರದಲ್ಲಿ ವಿಜಯ್ ದೇವರಕೊಂಡ ಅವರು ಮಿಂಚಿದ್ದರು. ಈಗ ಅವರು ಮತ್ತದೇ ಅವತಾರ ತಾಳಿದರೇ ಎನ್ನುವ ಪ್ರಶ್ನೆ ಮೂಡುತ್ತಿದೆ. ಇದಕ್ಕೆ ಕಾರಣ ಆಗಿರೋದು ಅವರ ನಟನೆಯ ಕಿಂಗ್​ಡಮ್ ಸಿನಿಮಾ. ವಿಜಯ್‌ ದೇವರಕೊಂಡ ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇದರಲ್ಲಿ ಅವರ ಲೈಫ್​ನಲ್ಲಿ ಸ್ಪೆಷಲ್ ಎನಿಸಿಕೊಂಡಿದ್ದು ಅರ್ಜುನ್ ರೆಡ್ಡಿ ಸಿನಿಮಾ. ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ಅವರು ಸಖತ್ ಮಾಸ್ ಆಗಿ ಕಾಣಿಸಿಕೊಂಡಿದ್ದರು. ವಿಜಯ್ ದೇವರಕೊಂಡ ಅವರು ಲೈಗರ್ ಚಿತ್ರ ಸೋಲಿನ ಬಳಿಕ ಸೈಲೆಂಟ್ ಆದರು. ಆ ಬಳಿಕ ಅವರು ದಿ ಫ್ಯಾಮಿಲಿ ಸ್ಟಾರ್ ಸಿನಿಮಾ ಮೂಡಿ ಬಂತು. ಈ ಚಿತ್ರ ಫ್ಲಾಪ್ ಆಯಿತು. ಆ ಬಳಿಕ ಒಂದೊಳ್ಳೆಯ ಸ್ಕ್ರಿಪ್ಟ್​ಗಾಗಿ ಹುಡುಕಾಟ ನಡೆಸಿದರು. ಆಗ ಸಿಕ್ಕಿದ್ದೇ ‘ಕಿಂಗ್​ಡಮ್’ ಚಿತ್ರ. ಈ ಸಿನಿಮಾದ ಶೂಟ್ ಮುಗಿದಿದ್ದು, ಈಗ ರಿಲೀಸ್​ಗೂ ರೆಡಿ ಆಗಿದೆ. ಮೇ 30ರಂದು ಚಿತ್ರ ತೆರೆಮೇಲೆ ಬರುತ್ತಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಜರ್ಸಿ ಹೆಸರಿನ ಸಿನಿಮಾ ಮಾಡಿ ಫೇಮಸ್ ಆದ ಗೌತಮ್ ತಿನ್ನನುರಿ ಜೊತೆ ವಿಜಯ್ ದೇವರಕೊಂಡ ಕಿಂಗ್​ಡಮ್ ಹೆಸರಿನ ಸಿನಿಮಾ ಮಾಡಿದ್ದಾರೆ. ಭಾಗ್ಯಶ್ರೀ ಬೋರ್ಸೆ ಈ ಚಿತ್ರಕ್ಕೆ ನಾಯಕಿ. ಈ ಸಿನಿಮಾದ ಸಾಂಗ್  ಪ್ರೋಮೋ ರಿಲೀಸ್ ಆಗಿದ್ದು, ಲಿಪ್ ಲಾಕ್ ದೃಶ್ಯ ಗಮನ ಸೆಳೆದಿದೆ. ಇದನ್ನು ನೋಡಿದ ಅನೇಕರಿಗೆ ವಿಜಯ್ ಅವರಲ್ಲಿ ಅರ್ಜುನ್ ರೆಡ್ಡಿ ಖದರ್ ಮತ್ತೆ ಕಾಣಿಸಿದೆ. ಕಿಂಗ್​ಡಮ್ ಚಿತ್ರದಲ್ಲಿ ವಿಜಯ್ ದೇವರಕೊಂಡ ಅವರು ಶಾರ್ಟ್​ ಹೇರ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಟೀಸರ್ ಗಮನ ಸೆಳೆದಿದೆ. ಇದನ್ನು ನೋಡಿದ ಅನೇಕರು ರಿಯಲ್ ರೌಡಿ ಅವತಾರ ಎಂದು ಹೇಳಿದ್ದಾರೆ. ಅನೇಕರಿಗೆ ಅರ್ಜುನ್ ರೆಡ್ಡಿ ಕಾಣಿಸಿದ್ದಾನೆ. ಸಿನಿಮಾದ ಟ್ರೇಲರ್ ನೋಡಿದರೆ ಮುಂದೇನು ಎಂದು ತಿಳಿಯಲಿದೆ.
 

No Reviews