News / Blog Details

  • Home
  • >
  • News / Blog Details

ವಿಜಯ್‌ ದೇವರಕೊಂಡ ಅಭಿನಯದ ಕಿಂಗ್‌ಡಮ್‌ ರಿಲೀಸ್‌ ಡೇಟ್‌ ಮುಂದೂಡಿಕೆ

  • 50
img ವಿಜಯ್‌ ದೇವರಕೊಂಡ ಅಭಿನಯದ ಕಿಂಗ್‌ಡಮ್‌ ರಿಲೀಸ್‌ ಡೇಟ್‌ ಮುಂದೂಡಿಕೆ
Font size:
Print

ಹೈದರಾಬಾದ್: ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ಅಭಿನಯದ ಬಹು ನಿರೀಕ್ಷಿತ ಕಿಂಗ್‌ಡಮ್ ಸಿನಿಮಾ   ರಿಲೀಸ್‌ ಗೆ ಕಾಯುತ್ತಿದ್ದ ಅಭಿಮಾನಿಗಳಿಗೆ ಚಿತ್ರತಂಡ ಬ್ಯಾಡ್ ನ್ಯೂಸ್ ನೀಡಿದೆ. ನಟ ದೇವರಕೊಂಡ ಅವರಿಗೆ ಬಾಕ್ಸಾಫೀಸ್‌ನಲ್ಲಿ ಕಳೆದ ಕೆಲ ಸಮಯದಿಂದ ನಿರೀಕ್ಷಿತ ಗೆಲುವು ಸಿಗುತ್ತಿಲ್ಲ. ಖುಷಿ, ಫ್ಯಾಮಿಲಿ ಸ್ಟಾರ್ ಸಿನಿಮಾಗಳು ನಿರೀಕ್ಷೆಗೆ ತಕ್ಕ ಕಮಾಲ್ ಮಾಡಿಲ್ಲ. ಹೀಗಾಗಿ ಅವರ 'ಕಿಂಗ್‌ಡಮ್ ಚಿತ್ರದ ಮೇಲೆ ಭಾರೀ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. ಈಗಾಗಲೇ ಟೀಸರ್ ಮೂಲಕ 'ಕಿಂಗ್‌ಡಮ್ ಟಾಲಿವುಡ್ ಗಲ್ಲಿಯಲ್ಲಿ ಸಖತ್ ಸೌಂಡ್ ಮಾಡಿದೆ. ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಲಾಗಿತ್ತು. ಇದೇ ಮೇ.30 ರಂದು ಚಿತ್ರ ರಿಲೀಸ್ ಆಗುವುದಿತ್ತು. ಆದರೆ ಇದೀಗ ಚಿತ್ರತಂಡ ರಿಲೀಸ್ ಡೇಟ್ ಮುಂದೂಡಿದೆ. ಪಹಲ್ಲಾಮ್ ದಾಳಿ  ಹಾಗೂ ಆಪರೇಷನ್ ಸಿಂದೂರ ಬಳಿಕ ಉಂಟಾಗಿರುವ ಭಾರತ-ಪಾಕಿಸ್ತಾನ ಉದ್ವಿಗ್ನತೆಯಿಂದಾಗಿ ಚಿತ್ರತಂಡ ಈ ನಿರ್ಧಾರವನ್ನು ಕೈಗೊಂಡಿದೆ. ದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ಅನಿರೀಕ್ಷಿತ ಘಟನೆಗಳು ಮತ್ತು ಪ್ರಸ್ತುತ ವಾತಾವರಣದಿಂದ ಸಿನಿಮಾದ ಪ್ರಚಾರ ಮತ್ತು ಸಂಭ್ರಮವನ್ನು ಆಚರಿಸಲು ಕಷ್ಟವಾಗುತ್ತದೆ. ಈ ಕಾರಣದಿಂದ ನಾವು ಚಿತ್ರವನ್ನು ಜುಲೈ 4 ರಂದು ರಿಲೀಸ್ ಮಾಡಲಿದ್ದೇವೆ. ಈ ನಿರ್ಧಾರವು ನಮ್ಮ 'ಕಿಂಗ್‌ಡಮ್ ಚಿತ್ರವನ್ನು ಉತ್ತಮ ರೀತಿಯಲ್ಲಿ ಪ್ರಸೆಂಟ್ ಮಾಡಲು ಸಾಧ್ಯವಾಗುತ್ತದೆ ಎಂದು ನಾವು ನಂಬುತ್ತೇವೆ. ಈ ಬದಲಾವಣೆ ತರಲು ಸಾಧ್ಯವಾದ ನಿರ್ಮಾಪಕರಾದ ದಿಲ್ ರಾಜ್ ಹಾಗೂ ನಿತಿನ್ ಅವರಿಗೆ ಧನ್ಯವಾದ' ಎಂದು ಚಿತ್ರತಂಡ ಪ್ರಕಟಣೆಯಲ್ಲಿ ತಿಳಿಸಿದೆ. ಚಿತ್ರದಲ್ಲಿ ವಿಜಯ್ ದೇವರಕೊಂಡ ಜತೆ ಭಾಗ್ಯಶ್ರೀ ಬೋರ್ಸೆ, ಸತ್ಯದೇವ್ ಸೇರಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಮತ್ತು ಫಾರ್ಚೂನ್ ಪೋರ್ ಕ್ರಿಯೇಷನ್ಸ್ ಬಂಡವಾಳ ಹಾಕಿದೆ. ಅನಿರುದ್ಧ ರವಿಚಂದರ್ ಮ್ಯೂಸಿಕ್ ನೀಡಿದ್ದಾರೆ.
 

No Reviews